ಬಣಕಲ್, ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಜಡಿಮಳೆ  

rain
10/06/2023

ಕೊಟ್ಟಿಗೆಹಾರ: ಬಣಕಲ್, ಚಾರ್ಮಾಡಿ ಘಾಟ್,ಕೊಟ್ಟಿಗೆಹಾರ ಸುತ್ತಮುತ್ತ ಮಳೆಗಾಲದಂತೆ ಮೋಡ ಕವಿದ ವಾತಾವರಣ ಉಂಟಾಗಿ ದಿನವಿಡೀ ದಾರಾಕಾರ ಮಳೆಯಾಗುತ್ತಿದೆ.

ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಭಾಗದಲ್ಲೂ ಮಂಜುಮುಸುಕಿನ ವಾತಾವರಣವಿದ್ದು, ಮುಂಗಾರು ಮಳೆ ಆರಂಭವಾದಂತೆ ಭಾಸವಾಗಿದೆ. ಸುರಿಯುತ್ತಿರುವ ಜಡಿ ಮಳೆಯಿಂದ ವಾತಾವರಣ ತಂಪಾಗಿದ್ದು ಕೃಷಿಗೆ ಅನುಕೂಲವಾಗಿದೆ.

ಹದ ಮಳೆಯಾಗುತ್ತಿರುವುದರಿಂದ ಮನೆ ನಿರ್ಮಾಣ ಕಾರ್ಯಗಳು ವಿಳಂಬವಾಗಿದೆ.ಕೊಟ್ಟಿಗೆಹಾರದಲ್ಲಿ ಜಡಿ ಮಳೆ ಸುರಿಯುತ್ತಿರುವುದರಿಂದ ಕಾಫಿ ತೋಟಗಳಿಗೆ ಗೊಬ್ಬರ ಹಾಕಲು ಸಕಾಲವಾಗಿದೆ.

ಚಾರ್ಮಾಡಿ ಘಾಟ್ನಲ್ಲೀ  ಮಂಜು ಮುಸುಕಿನ ವಾತಾವರಣ ಇರುವುದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.ಚಂಡ ಮಾರುತದ ವೈಪರೀತ್ಯದಿಂದ ಮಳೆಯಾಗುತ್ತಿದ್ದು ಜನರು ಮಳೆಗಾಲಕ್ಕೆ ಸಿದ್ದರಾಗುವ ಮುನ್ನವೆ ಬಂದ ಮಳೆಯಿಂದ ಕಟ್ಟಡ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ತೊಂದರೆ ಉಂಟಾಯಿತು. ಜಡಿಮಳೆಯಿಂದ  ಕೃಷಿ ಚಟುವಟಿಕೆಗಳು ಗರಿಗೆದರಿವೆ.ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version