4:57 AM Thursday 15 - January 2026

ಟ್ರ್ಯಾಕ್ಟರ್ ಹರಿದು ಬಾಲಕ ಸಾವು; ಮನನೊಂದ ಚಾಲಕ ಆತ್ಮಹತ್ಯೆಗೆ ಶರಣು

begur police
09/07/2021

ಚಾಮರಾಜನಗರ: ಟ್ರ್ಯಾಕ್ಟರ್ ಹರಿದು ಬಾಲಕನೋರ್ವ ಮೃತಪಟ್ಟಿದ್ದು, ಬಾಲಕ ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆಯೇ ಮನನೊಂದ ಟ್ರ್ಯಾಕ್ಟರ್ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸವಕನಪಾಳ್ಯದಲ್ಲಿ ನಡೆದಿದೆ.

5 ವರ್ಷ ವಯಸ್ಸಿನ ಹರ್ಷ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಮೃತಪಟ್ಟ ಬಾಲಕನಾಗಿದ್ದು,  23 ವರ್ಷ ವಯಸ್ಸಿನ ಸುನೀಲ್ ಆತ್ಮಹತ್ಯೆಗೆ ಶರಣಾಗಿರುವ ಟ್ರ್ಯಾಕ್ಟರ್ ಚಾಲಕನಾಗಿದ್ದಾನೆ.

ಕ್ರಿಕೆಟ್ ಆಡಲು ಸವಕನಪಾಳ್ಯದಲ್ಲಿ  ಮೈದಾನ ಸಮತಟ್ಟು ಮಾಡುತ್ತಿದ್ದ ವೇಳೆ ನಿಂತಿದ್ದ ಟ್ರ್ಯಾಕ್ಟರ್ ನ್ನು ಸುನೀಲ್ ಚಲಾಯಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಮೈದಾನದ ಅಂಚಿನಲ್ಲಿದ್ದ ಬಾಲಕ ಹರ್ಷನ ಮೇಲೆ ಟ್ರ್ಯಾಕ್ಟರ್ ಹರಿದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ದಾರಿ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ.

ಬಾಲಕ ಮೃತಪಟ್ಟಿರುವ ವಿಚಾರ ಸುನೀಲ್ ಗೆ ತಿಳಿಯುತ್ತಿದ್ದಂತೆ ಮನನೊಂದ ಆತ ತನ್ನ ಮೈಸೂರಿನ ರೂಮ್ ಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version