9:09 AM Thursday 16 - October 2025

ಭಾರತ ಕೊಳಕು ಎಂದು ಹೇಳಿ ಟ್ರಂಪ್ ಭಾರತೀಯರ ಮನಸ್ಸಿಗೆ ನೋವು ಮಾಡಿದ್ದಾರೆ | ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಖಂಡನೆ

25/10/2020

ವಾಷಿಂಗ್ಟನ್: ಭಾರತ ಕೊಳಕು, ಅಲ್ಲಿಯ ಗಾಳಿಯಂತೂ ಹೊಲಸು ಎಂದು ಹೇಳಿಕೆ ನೀಡುವ ಮೂಲಕ ಡೊನಾಲ್ಡ್ ಟ್ರಂಪ್ ಭಾರತೀಯರ ಮನಸ್ಸಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಟ್ರಂಪ್ ತನ್ನ ಗೆಳೆಯರ ಬಗ್ಗೆ ರೀತಿಯ ಮಾತುಗಳನ್ನಾಡಬಾರದು ಎಂದು ಅವರು, ‘ನಮಸ್ತೆ ಟ್ರಂಪ್’ ಆಯೋಜನೆಯನ್ನು ಟ್ರಂಪ್ ಗೆ ನೆನಪಿಸಿದ್ದಾರೆ. ಭಾರತದ ಮನಸ್ಸನ್ನು ಟ್ರಂಪ್ ನೋಯಿಸಿದ್ದಾರೆ ಎಂದು ಜೋ ಬಿಡೆನ್ ಹೇಳಿದ್ದಾರೆ.

ಟ್ರಂಪ್ ಭಾರತವನ್ನು ಹೊಲಸು ಎಂದು ಹೇಳಿಕೆ ನೀಡಿದರೂ ಆಡಳಿತ ಪಕ್ಷವಾಗಿರುವ ಬಿಜೆಪಿಯ ನಾಯಕರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ, ರಾಷ್ಟ್ರೀಯವಾದಿಗಳೆನ್ನುವ ಸಂಘಟನೆಗಳು ಬಾಯಿ ಮುಚ್ಚಿಕುಳಿತಿವೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ. ಟ್ರಂಪ್ ನಂತಹವರನ್ನು ಕರೆಸಲು ಕೇಂದ್ರ ಸರ್ಕಾರ ಜನರ ದುಡ್ಡನ್ನು ಬಳಕೆ ಮಾಡಿಕೊಂಡಿತು. ಆದರೆ, ಇದೇ ಭಾರತವನ್ನು ಟ್ರಂಪ್ ಹೊಲಸು, ಕೊಳಕು ಎಂದಾಗ ಟ್ರಂಪ್ ನ ಕಪಾಳಕ್ಕೆ ಹೊಡೆಯುವಂತಹ ಒಂದೂ ಪ್ರತಿಕ್ರಿಯೆ ನೀಡದೇ ಹೇಡಿಯಂತೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಕುಳಿತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ

Exit mobile version