ಬೆಂಗಳೂರು: ಸಮುದಾಯ ಬೆಂಗಳೂರು ವತಿಯಿಂದ ಟಿ.ಎಸ್.ಲೋಹಿತಾಶ್ವರವರಿಗೆ ನುಡಿ ನಮನ 

nudinamana
26/11/2022

ಬೆಂಗಳೂರು: ಸಮುದಾಯ ಬೆಂಗಳೂರು ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ಟಿ.ಎಸ್.ಲೋಹಿತಾಶ್ವ ರವರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

27 ನವೆಂಬರ್ 2022, ಭಾನುವಾರ – ಸಂಜೆ 4.30ಕ್ಕೆ, ಸ್ಥಳ : ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಕವಿ ಮತ್ತು ನಾಟಕಕಾರರು ಹೆಚ್.ಎಸ್. ಶಿವಪ್ರಕಾಶ್, ಕವಿ ಮತ್ತು ಸಮಾಜಮುಖಿ ಚಿಂತಕರು ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕವಿ ಮತ್ತು ಚಿಂತಕರು ಅಗ್ರಹಾರ ಕೃಷ್ಣಮೂರ್ತಿ, ಮಹಿಳಾ ಮತ್ತು ಸಾಮಾಜಿಕ ನ್ಯಾಯ ಪ್ರತಿಪಾದಕಿ ವಿಮಲಾ ಕಲಾಗರ್, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಸುಚೇಂದ್ರ ಪ್ರಸಾದ್, ಗಾಯಕ ಮತ್ತು ನಿರ್ದೇಶಕರು ಜನಾರ್ಧನ್ ಹೆಚ್.(ಜನ್ನಿ), ಶರತ್ ಲೋಹಿತಾಶ್ವ ಮತ್ತು ಲೋಹಿತಾಶ್ವ ಕುಟುಂಬ ವರ್ಗದವರು, ಲೋಹಿತಾಶ್ವ ಅವರ ಆಪ್ತಮಿತ್ರ ಸಿ.ಕೆ.ಗುಂಡಣ್ಣ ಭಾಗಿಯಾಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version