ಫಿಲಿಫೈನ್ಸ್ ನಲ್ಲಿ ಕಾಫಿನಾಡ ಯುವತಿ ಪರದಾಟ: ಪ್ರಬಲ ಭೂಕಂಪದ ಬೆನ್ನಲ್ಲೇ ಸುನಾಮಿ ಭೀತಿ

ಚಿಕ್ಕಮಗಳೂರು: ಫಿಲಿಫೈನ್ಸ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಈ ನಡುವೆ ಸುನಾಮಿ(Tsunami)ಯ ಆತಂಕದಲ್ಲಿ ಫಿಲಿಫೈನ್ಸ್(Philippines) ಇದೆ. ಈ ಹಿನ್ನೆಲೆಯಲ್ಲಿ ಫಿಲಿಫೈನ್ಸ್ ಗೆ ಓದಲು ಹೋಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಚಿಕ್ಕಮಗಳೂರು ನಗರದ ಯುವತಿ ಐಶ್ವರ್ಯ ಫಿಲಿಫೈನ್ಸ್ ನಲ್ಲಿ ಸಿಲುಕಿದ್ದು, ಮೆಡಿಕಲ್ ಓದಲು ಹೋಗಿದ್ದ ಯುವತಿ ಪ್ರಕೃತಿ ವಿಕೋಪದ ಹಿನ್ನೆಲೆ ತಾಯ್ನಾಡಿಗೆ ವಾಪಸ್ ಬರಲಾರದೇ ಪರದಾಡುತ್ತಿದ್ದಾರೆ.
ಫಿಲಿಫೈನ್ಸ್ ನ ಸಿಬು ನಗರದಲ್ಲಿ ಐಶ್ವರ್ಯ ಲಾಕ್ ಆಗಿದ್ದಾರೆ. ಈ ಮಧ್ಯೆ ಆತಂಕದಲ್ಲಿರುವ ಐಶ್ವರ್ಯ ಪೋಷಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ, ತಮ್ಮ ಮಗಳನ್ನು ವಾಪಸ್ ಕರೆಸಲು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ವೈದ್ಯ ಯುವತಿ ಐಶ್ವರ್ಯ ಐದು ವರ್ಷದ ಮೆಡಿಕಲ್ ಕೋರ್ಸ್ ಮುಗಿಸಿದ್ದಾರೆ. ಸದ್ಯ ಪ್ರಕೃತಿ ವಿಕೋಪದ ಹಿನ್ನೆಲೆ ವಾಪಸ್ ಬರಲಾಗದೇ ಪರದಾಡುತ್ತಿದ್ದಾರೆ. ಭೂಕಂಪದ ಹಿನ್ನೆಲೆ ಊಟ–ತಿಂಡಿ–ನೀರು ಯಾವುದೂ ಸಿಗದೇ ಭಾರತೀಯ ವಿದ್ಯಾರ್ಥಿಗಳು ಫಿಲಿಫೈನ್ಸ್ ನಲ್ಲಿ ಆತಂಕದಲ್ಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD