1:42 PM Saturday 12 - September 2026

ಕೋಡಿ ಹರಿದ ಎರಡು ಬೃಹತ್ ಕೆರೆಗಳು: 7 ಬೆಟ್ಟಗಳ ನಡುವಿನ ಅಯ್ಯನಕೆರೆ, ಮದಗದ ಕೆರೆ

madagada kere
29/07/2025

ಚಿಕ್ಕಮಗಳೂರು:   ಪಶ್ಚಿಮಘಟ್ಟ ತಪ್ಪಲಿನಲ್ಲಿ ಭಾರೀ ಮಳೆಗೆ 2 ಬೃಹತ್ ಕೆರೆಗಳು ಕೋಡಿ ಬಿದ್ದಿವೆ. 2036 ಎಕರೆಯ ಅಯ್ಯನಕೆರೆ, 843 ಎಕರೆಯ ಮದಗದ ಕೆರೆ ತುಂಬಿ ಕೋಡಿ ಹರಿದಿದೆ.

ಜಾನಪದ ಸಾಹಿತ್ಯಕ್ಕೆ ಸಾಕ್ಷಿಯಾಗಿರೋ ಮದಗದ ಕೆರೆ ತುಂಬಿ ತುಳುಕುತ್ತಿದೆ, ನೋಡಲು ಸಮುದ್ರದಂತೆ ಭಾಸವಾಗೋ 2 ಬೃಹತ್ ಕೆರೆಗಳು ತುಂಬಿ ಕೋಡಿ ಹರಿದಿವೆ.

36 ಅಡಿ ಆಳ 2036 ಎಕರೆ ವಿಸ್ತೀರ್ಣದ ಅಯ್ಯನಕೆರೆ, 60 ಅಡಿ ಆಳ 843 ಎಕರೆ ವಿಸ್ತೀರ್ಣದ ಮದಗದ ಕೆರೆ ತುಂಬಿ ಹರಿದಿವೆ.  7 ಗುಡ್ಡಗಳ ಮಧ್ಯೆ ಸಮುದ್ರದಂತೆ ಕಾಣೋ ಅಯ್ಯನಕೆರೆ ಮುಗಿಲೆತ್ತರದ ಬೆಟ್ಟ-ಗುಡ್ಡಗಳು ಮಧ್ಯದಲ್ಲಿರೋ ಕೆರೆಗಳು ಕೋಡಿ ಹರಿದಿವೆ.

ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದಲ್ಲಿ ಈ ಕೆರೆಗಳಿವೆ, ಪಶ್ಷಿಮಘಟ್ಟಗಳ ಸಾಲಲ್ಲಿ ನಿರಂತರ ಮಳೆ ಹಿನ್ನೆಲೆ, ಕೆರೆಗೆ ಭಾರೀ ಪ್ರಮಾಣದ ನೀರು ಸಂಗ್ರಹವಾಗಿವೆ. ಸಾಮಾನ್ಯವಾಗಿ ಆಗಸ್ಟ್ ಮಧ್ಯದಲ್ಲಿ ಕೋಡಿ ಬೀಳ್ತಿದ್ದ 2 ಕೆರೆಗಳು, ಈ ಬಾರಿ ಜುಲೈ ಅಂತ್ಯದಲ್ಲೇ ಕೋಡಿ ಹರಿದಿರುವುದು ವಿಶೇಷವಾಗಿದೆ.

ಈ ಕೆರೆ ತುಂಬಿದ್ರೆ ಕಡೂರು ತಾಲೂಕಿನ ನೀರಿನ ಬವಣೆ ತಪ್ಪಲಿದೆ, ಕೆರೆಗಳು ಕೋಡಿ ಬಿದ್ದು ಮಾರಿಕಣಿವೆ ಡ್ಯಾಂಗೆ ನೀರು ಸೇರುತ್ತವೆ.  ಕೆರೆ ತಪ್ಪಲಿನ 34 ಹಳ್ಳಿಯ ಜನ–ಜಾನುವಾರುಗಳಿಗೆ ಈ ನೀರೇ ಜೀವಜಲವಾಗಿದೆ.  ಕೆರೆಯಲ್ಲಿ ನೀರು ಕಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version