ಉದ್ಧವ್ ಠಾಕ್ರೆ ‘ಔರಂಗಜೇಬ್ ಫ್ಯಾನ್ ಕ್ಲಬ್’ ನಾಯಕ; ಶರದ್ ಪವಾರ್ ಭ್ರಷ್ಟಾಚಾರದ ನಾಯಕ: ಅಮಿತ್ ಶಾ ವ್ಯಂಗ್ಯ

21/07/2024

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರನ್ನು ‘ಔರಂಗಜೇಬ್ ಫ್ಯಾನ್ ಕ್ಲಬ್’ ಮುಖ್ಯಸ್ಥ ಎಂದು ಕರೆದಿದ್ದಾರೆ. ಎನ್ ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಟೀಕಿಸಿದ ಅಮಿತ್ ಶಾ, ಅವರನ್ನು ದೇಶದಲ್ಲಿ ಆಳವಾಗಿ ಬೇರೂರಿರುವ ‘ಸರಗಣ’ (ನಾಯಕ) ಎಂದು ಕರೆದಿದ್ದಾರೆ.

ಠಾಕ್ರೆ ನಿರಂತರವಾಗಿ ಪ್ರಶ್ನಾರ್ಹ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಶಾ, “ಔರಂಗಜೇಬ್ ಅಭಿಮಾನಿ ಸಂಘದಲ್ಲಿ ಯಾರಿದ್ದಾರೆ..? 26/11 ಭಯೋತ್ಪಾದಕ ದಾಳಿಯ ಅಪರಾಧಿ ಕಸಬ್ ಗೆ ಬಿರಿಯಾನಿ ನೀಡುವವರು, ಯಾಕೂಬ್ ಮೆಮನ್ ಗೆ ಕ್ಷಮೆ ಕೋರುವವರು, ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಗೆ ಶಾಂತಿ ಸಂದೇಶವಾಹಕ ಪ್ರಶಸ್ತಿ ನೀಡುವವರು ಮತ್ತು ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಿಎಫ್ ಐ ಅನ್ನು ಬೆಂಬಲಿಸುವವರು. ಈ ಜನರೊಂದಿಗೆ ಕುಳಿತುಕೊಳ್ಳಲು ಉದ್ಧವ್ ಠಾಕ್ರೆ ನಾಚಿಕೆಪಡಬೇಕು” ಎಂದು ಕಿಡಿಕಾರಿದ್ದಾರೆ.

ಈ ‘ಔರಂಗಜೇಬ್ ಅಭಿಮಾನಿ ಸಂಘ’ ಈ ದೇಶವನ್ನು ಭದ್ರಪಡಿಸಲು ಸಾಧ್ಯವಿಲ್ಲ ಎಂದ ಅಮಿತ್ ಶಾ, “ಭಾರತೀಯ ಜನತಾ ಪಕ್ಷ ಮಾತ್ರ ದೇಶದ ಸುರಕ್ಷತೆಯನ್ನು ಖಚಿತಪಡಿಸಬಲ್ಲದು. ಮಹಾರಾಷ್ಟ್ರವನ್ನು ಭದ್ರಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಏಕೈಕ ಪಕ್ಷ ಬಿಜೆಪಿ” ಎಂದು ಗೃಹ ಸಚಿವರು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version