ದುರಂತ: ಕಂದಕಕ್ಕೆ ಉರುಳಿದ ಬಸ್; ಏಳು ಮಂದಿ ದುರ್ಮರಣ

09/10/2023

ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ಏಳು ಜನರು ಸ್ಥಳದಲ್ಲೇ ಮೃತಪಟ್ಟು 20 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ನೈನಿತಾಲ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟವರಲ್ಲಿ ಐವರು ಮಹಿಳೆಯರು ಹಾಗೂ ಒಂದು ಶಿಶು ಸಹ ಸೇರಿದೆ.

ಹರ್ಯಾಣ ರಾಜ್ಯದ ಹಿಸಾರ್‌ ಜಿಲ್ಲೆಯ ಪ್ರಯಾಣಿಕರನ್ನು ಬಸ್‌ ಕರೆದೊಯ್ಯುತ್ತಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಸ್‌ ನಲ್ಲಿ 33 ಮಂದಿ ಪ್ರಯಾಣಿಸುತ್ತಿದ್ದರು. ತೀವ್ರವಾಗಿ ಗಾಯಗೊಂಡಿದ್ದ  18 ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್‌ಡಿಆರ್‌ಎಫ್‌ ಪಡೆ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿತ್ತು.

ಇದೇ ವೇಳೆ ಕತ್ತಲೆಯಿಂದಾಗಿ, ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಪಲ್ಪ ತೊಡಕುಂಟಾಯಿತು. ಮಾಹಿತಿಯ ಪ್ರಕಾರ, ಬಸ್ಸಿನಲ್ಲಿ ಪ್ರವಾಸಿಗರು, ಶಾಲಾ ಸಿಬ್ಬಂದಿ ಮತ್ತು ಇತರರು ಇದ್ದರು. ಇತರ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತರ ಶವಗಳನ್ನು ಎಸ್ಡಿಆರ್ ಎಫ್ ವಶಪಡಿಸಿಕೊಂಡು ಸಿವಿಲ್ ಪೊಲೀಸರಿಗೆ ಹಸ್ತಾಂತರ ಮಾಡಿದೆ.

ಇತ್ತೀಚಿನ ಸುದ್ದಿ

Exit mobile version