9:41 PM Wednesday 15 - October 2025

ವಡಾಪಾವ್ ತಿಂದು ಬಿಲ್ ಪಾವತಿಸದೇ ತೆರಳಿದ್ದ ಕೇಂದ್ರ ಸಚಿವರಿಗೆ ತೀವ್ರ ಮುಜುಗರ!

wadapav
20/02/2022

ಥಾಣೆ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮತ್ತಿತರರು  ವಡಾಪಾವ್ ತಿಂದು ಬಿಲ್ ಕೊಡದೇ ಹೋದ ಘಟನೆ ನಡೆದಿದ್ದು, ಇದರಿಂದ ಅಸಮಾಧಾನಗೊಂಡ ಹೊಟೇಲ್ ಮಾಲಿಕ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ 5 ಮತ್ತು 6ನೇ ರೈಲು ಮಾರ್ಗಗಳ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹಾಜರಾಗಿದ್ದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ , ರೈಲ್ವೆ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ದಾನ್ವೆ, ಸಂಸದ ವಿನಯ್ ಸಹಸ್ರಬುದ್ಧೆ, ಬಿಜೆಪಿ ಶಾಸಕ ಸಂಜಯ್ ಕೇಲ್ಕರ್, ಶಾಸಕ ನಿರಂಜನ್ ದಾವ್ಖರೆ. ಶಾಸಕ ನಿರಂಜನ್ ದಾವ್ಖರೆ ಮತ್ತಿತರರರು ಹೋಟೆಲ್‌ ಗಜಾನನ್‌ ನಲ್ಲಿ ವಡಾಪಾವ್ ಸವಿದಿದ್ದರು. ಆದರೆ, ಯಾರೂ ಕೂಡ ಬಿಲ್ ಪಾವತಿ ಮಾಡದೇ ಹಾಗೆಯೇ ತೆರಳಿದ್ದಾರೆ.

ಈ ವಿಚಾರವನ್ನು ಹೊಟೇಲ್ ಮಾಲಿಕ ಸಾಮಾಜಿಕ ಜಾಲತಾಣಗಳಲ್ಲಿ  ಶೇರ್ ಮಾಡಿದ್ದು, ಈ ಬಗ್ಗೆ ಒಂದು ವಿಡಿಯೋ ಕೂಡ ಶೇರ್ ಮಾಡಿದ್ದಾರೆ.  ಈ ವಿಡಿಯೋ ಬೆನ್ನಲ್ಲೇ ಸಚಿವರುಗಳು ತೀವ್ರ ಮುಜುಗರಕ್ಕೀಡಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ ಆದ ಬಳಿಕ ಬಿಜೆಪಿ ಕಾರ್ಯಕರ್ತರೊಬ್ಬರು ಹೊಟೇಲ್ ಗೆ ಬಂದು 2 ಸಾವಿರ ರೂಪಾಯಿ ಬಿಲ್ ಪಾವತಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಂದಿಬೆಟ್ಟದಿಂದ ಬೆಟ್ಟದಿಂದ ಜಾರಿ ಬಿದ್ದ ಯುವಕ: ಅಗ್ನಿ ಶಾಮಕ ದಳ, ಪೊಲೀಸರಿಂದ ಶೋಧ ಕಾರ್ಯ

ಒಂದೇ ಕುಟುಂಬದ ಮೂವರ ಸಜೀವ ದಹನ ಪ್ರಕರಣ: 9 ಮಂದಿ ಆರೋಪಿಗಳ ಬಂಧನ

ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ಮೂವರ ಆರೋಪಿಗಳ ಬಂಧನ, 28 ಮಹಿಳೆಯರ ರಕ್ಷಣೆ

ಸಾಲದ ಹೊರೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಆಕ್ಸ ಲ್ ತುಂಡಾಗಿ ಹೆದ್ದಾರಿಯಲ್ಲೇ ಕಾರು ಪಲ್ಟಿ: ಮೂವರು ಗಂಭೀರ

ಇತ್ತೀಚಿನ ಸುದ್ದಿ

Exit mobile version