ವೀರ ಸಾವರ್ಕರ್ ಪ್ರತಿಮೆ ಮಾಡುವುದು ಅಷ್ಟೊಂದು ಸಮಂಜಸ ಅಲ್ಲ: ಬಿಜೆಪಿ ಶಾಸಕ ಕೆ.ರಘುಪತಿ ಭಟ್

raghupati bhat
23/08/2022

ಉಡುಪಿ: ಉಡುಪಿಯಲ್ಲಿ ವೀರ ಸಾವರ್ಕರ್ ಪ್ರತಿಮೆ ಮಾಡುವುದು ಅಷ್ಟೊಂದು ಸಮಂಜಸ ಅಲ್ಲ, ಮುಂದಿನ ದಿನಗಳಲ್ಲಿ ಪ್ರತಿಮೆಗೆ ಅವಮಾನವಾದರೆ ಕಷ್ಟ ಎಂದು ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಅಭಿಪ್ರಾಯಪಟ್ಟರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,  ವೀರ ಸಾವರ್ಕರ್ ಪುತ್ಥಳಿ ಬದಲಿಗೆ ಸಾವರ್ಕರ್ ಸರ್ಕಲ್ ನಿರ್ಮಿಸಲು ನಗರ ಸಭೆಗೆ ಪತ್ರ ಬರೆದಿದ್ದೇನೆ. ಜನನಿಬಿಡ ಪ್ರದೇಶವಾದ ಹಳೆ ತಾಲೂಕ ಆಫೀಸ್ ಬಳಿಯ ಸರ್ಕಲ್ ಗೆ ಸಾವರ್ಕರ್ ಹೆಸರು ಇಡಲು ನಗರ ಸಭೆಯ ಅಧಿವೇಶನದಲ್ಲಿ ಠರಾವು ಇಡುತ್ತೇನೆ. ಮೂರ್ತಿ ನಿರ್ಮಿಸುವ ಬಗ್ಗೆ ಚರ್ಚೆ ಮಾಡಬೇಕು. ಆದರೆ ಖಂಡಿತವಾಗಿ ಉಡುಪಿಯಲ್ಲಿ ವೀರ ಸಾವರ್ಕರ್ ಸರ್ಕಲ್ ನಿರ್ಮಾಣವಾಗುತ್ತೆ. ವೀರ ಸಾವರ್ಕರ್ ಜೊತೆಗೆ ಅಂಬೇಡ್ಕರ್ ಸರ್ಕಲ್ ಕೂಡ ಮಾಡುತ್ತೇವೆ ಎಂದು ಅವರು ಇದೇ ವೇಳೆ ತಿಳಿಸಿದರು.

ಹಿಜಾಬ್ ಗದ್ದಲದಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ವಂಚನೆಯಾಗಿದೆ ಎಂಬ ಸಿಎಫ್ ಐ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ಹಿಜಾಬ್ ಹೋರಾಟವನ್ನು ಪ್ರಾರಂಭ ಮಾಡಿದ್ದು ನಾವಲ್ಲ. ಹಿಜಾಬ್ ಹೋರಾಟವನ್ನು ಪ್ರಾರಂಭ ಮಾಡಿದ್ದು ಸಿಎಫ್ ಐ. ನಮ್ಮ ಕಾಲೇಜಿನಲ್ಲಿ ಹಿಂದಿನಿಂದಲೂ ಯೂನಿಫಾರ್ಮ್ ಕೋಡ್ ಪಾಲನೆ ಆಗುತ್ತಿತ್ತು. ಕಳೆದ 20 ವರ್ಷದಿಂದ ಯೂನಿಫಾರ್ಮ್ ಕೋಡ್ ಇದ್ದ ಬಗ್ಗೆ ದಾಖಲೆ ಕೋರ್ಟಿಗೆ ಸಲ್ಲಿಸಿದ್ದೆವು. ಅದೇ ಕಾರಣಕ್ಕೆ ನಮಗೆ ಹೈಕೋರ್ಟಿನಲ್ಲಿ ಜಯ ಸಿಕ್ಕಿದೆ ಎಂದರು.

ಕ್ಲಾಸ್ ರೂಮ್ ವರೆಗೆ ಹಿಜಾಬ್ ಧರಿಸಿ ಬಂದು ನಂತರ ಹಿಜಾದ್ ತೆಗೆದಿಟ್ಟು ಪಾಠ ಕೇಳುತ್ತಿದ್ದರು. ಸಿ ಎಫ್ ಐ ಯವರು ಬಂದು ಹಿಜಾಬ್ ವಿವಾದ ಪ್ರಾರಂಭಿಸಿದರು. ಇವರಿಂದ ಹಿಜಾಬ್ ಧರಿಸಿ  ಹೋಗುತ್ತಿದ್ದ ಕಾಲೇಜುಗಳಲ್ಲೂ ಸಮಸ್ಯೆ ಉಂಟಾಯ್ತು. ಆ ಕಾಲೇಜುಗಳಲ್ಲೂ ಈಗ ಹಿಜಾಬ್ ಧರಿಸಲು ಅವಕಾಶವಿಲ್ಲದಂತಾಗಿದೆ. ಹಿಜಾಬ್ ಕಾರಣಕ್ಕೆ ಯಾರಾದರೂ ಶಿಕ್ಷಣ ವಂಚಿತರಾಗಿದ್ದರೆ, ನೇರವಾಗಿ ಸಿ ಎಫ್ ಐ ಕಾರಣ ಎಂದು ಅವರು ಆರೋಪಿಸಿದರು.

ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇವತ್ತಿಗೂ ಮುಸ್ಲಿಂ ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ. ಪ್ರತಿಭಾನ್ವಿತ ಮುಸ್ಲಿಂ ಹೆಣ್ಣು ಮಕ್ಕಳಿಗೆ ನಾವು ಸನ್ಮಾನ ಮಾಡಿದ್ದೇವೆ. ಕಳೆದ ವರ್ಷಕ್ಕಿಂತ ಜಾಸ್ತಿ ಮುಸ್ಲಿಂ ಹೆಣ್ಣು ಮಕ್ಕಳು ಈ ಬಾರಿ ಅಡ್ಮಿಶನ್ ಪಡೆದಿದ್ದಾರೆ. ಇದು ಕೇವಲ ಸಿಎಫ್ ಐ ಮಾಡಿರುವ ಸೃಷ್ಟಿ. ವಿದ್ಯಾಭ್ಯಾಸ ಬೇಕು ಎನ್ನುವ ಹೆಣ್ಣು ಮಕ್ಕಳು ಕಲಿಯುತ್ತಿದ್ದಾರೆ ಧರ್ಮದ ಅಂದತೆ ಸೃಷ್ಟಿಸುವವರು ಸೃಷ್ಟಿಸ್ತಾ ಇದ್ದಾರೆ ಎಂದು ತಿರುಗೇಟು ನೀಡಿದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version