10:45 AM Friday 11 - September 2026

ವಿಡಿಯೋ ಮುಂದಿಟ್ಟುಕೊಂಡು ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ಮಹಿಳೆಯಿಂದ ಬ್ಲ್ಯಾಕ್ ಮೇಲ್ | ದೂರು ದಾಖಲು

chi na ramu
22/08/2021

ಬೆಂಗಳೂರು: ಫೇಸ್ ಬುಕ್ ಮೆಸೆಂಜರ್ ಮೂಲಕ ಪರಿಚಯವಾದ ಮಹಿಳೆ ಹಾಗೂ ಮತ್ತೋರ್ವ ವ್ಯಕ್ತಿ, ವಿಡಿಯೋವೊಂದನ್ನು ಮುಂದಿಟ್ಟುಕೊಂಡು ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬೆಂಗಳೂರು ಸೆಂಟ್ರಲ್ ಸಿಇಎನ್ ಠಾಣೆಗೆ ಬಿಜೆಪಿ ಮುಖಂಡ ಚಿ.ನಾ.ರಾಮು ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಬಿಜೆಪಿ ಮುಖಂಡರಾಗಿರುವ ಚಿ.ನಾ.ರಾಮು ಅವರಿಗೆ ಮೆಸೆಂಜರ್ ಮೂಲಕ ಪರಿಚಯವಾಗಿದ್ದ ಮಹಿಳೆಯೊಬ್ಬರು ಮೊಬೈಲ್ ನಂಬರ್ ಪಡೆದುಕೊಂಡು ವಿಡಿಯೋ ಕಾಲ್ ಮಾಡಿದ್ದು, ವಿಡಿಯೋ ಕಾಲ್ ನಲ್ಲಿ ಯುವತಿ ಅಸಭ್ಯವಾಗಿ ವರ್ತಿಸಿದ್ದಳು ಎಂದು ಹೇಳಲಾಗಿದೆ.

ಇದಾದ ಬಳಿಕ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ,  ಯುವತಿಯೊಂದಿಗೆ ನಗ್ನರಾಗಿರುವ ವಿಡಿಯೋ ನನ್ನ ಬಳಿ ಇದೆ. ಹಣ ನೀಡದಿದ್ದರೆ, ನಿಮ್ಮ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈತನ ಬೆದರಿಕೆಗೆ ಹೆದರಿದ ಚಿ.ನಾ.ರಾಮು ಅವರು ಈಗಾಗಲೇ ಅಪರಿಚಿತ ವ್ಯಕ್ತಿಯ ಖಾತೆಗೆ 31,500 ರೂಪಾಯಿಗಳನ್ನು ಜಮಾ ಮಾಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ರಾಮು ಅವರ ದೂರು ಆಧರಿಸಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ಜಿಮ್ ನಲ್ಲಿ ಜೊತೆಯಾಗಿ ವರ್ಕೌಟ್ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ!

ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ಪ್ರತಾಪ್ ಸಿಂಹ ಸಾಧನೆಯಲ್ಲ | ಹೆಚ್.ವಿಶ್ವನಾಥ್

ದೇವರಿಗೆ ಪೂಜೆ ಮಾಡಿದ್ರೂ, ಹೈಕಮಾಂಡ್ ಕದ ತಟ್ಟಿದ್ರೂ ಸಿಗಲಿಲ್ಲ ಆನಂದ!

ಮತ್ತೆ ಅಖಾಡಕ್ಕಿಳಿಯಲಿದ್ದಾರೆ WWE ಸೂಪರ್ ಸ್ಟಾರ್ ಸಿಎಂ ಫಂಕ್ | ಖುಷಿಯಲ್ಲಿ ಕಣ್ಣೀರು ಹಾಕಿದ ಅಭಿಮಾನಿಗಳು

ಪಾನಿಗೆ ಮೂತ್ರ ಮಾಡಿದ ಜಗ್ ಮುಳುಗಿಸಿದ ಪಾನಿಪುರಿ ಮಾರಾಟಗಾರ: ಈ ವೈರಲ್ ವಿಡಿಯೋದ ಘಟನೆ ಎಲ್ಲಿ ನಡೆದದ್ದು ಗೊತ್ತೆ?

ಕೊಲೆ ಆರೋಪಿ ಭವ್ಯ ಸ್ವಾಗತ: ಜೈಲಿನಿಂದ ಹೊರ ಬಂದವರೇ ಕಾಂಗ್ರೆಸ್ ಗೆ ಶ್ರೇಷ್ಠರು: ಬಿಜೆಪಿ ಟೀಕೆ

ನಾವು ಫಸ್ಟ್… ನಾವು ಫಸ್ಟ್…! ಮದುವೆ ನಡೆಸಲು ಎರಡು ಕುಟುಂಬದ ನಡುವೆ ಡಿಶ್ಯುಂ… ಡಿಶ್ಯುಂ | ವಿಡಿಯೋ ವೈರಲ್

 

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version