7:27 AM Wednesday 20 - August 2025

ಚುನಾವಣೆ ಬರುತ್ತಿದ್ದಂತೆಯೇ ಕೇರಳ ಸಿಎಂ ಎಂತಹ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ ಗೊತ್ತಾ?

05/03/2021

ಎರ್ನಾಕುಲಂ: ಕೇರಳ ಸಿಎಂ ವಿದೇಶಿ ಕರೆನ್ಸಿ ಕಳ್ಳಸಾಗಣಿಕೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಸಿಲುಕಿದ್ದು,  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಸ್ವಪ್ನಾ ಸುರೇಶ್ ಅವರು,  ತಾನು ಪಿಣರಾಯಿ ವಿಜಯನ್  ಸೂಚನೆಯ ಮೇರೆಗೆ  ವಿದೇಶಿ ಕರೆನ್ಸಿ ಕಳ್ಳಸಾಗಣೆ ಮಾಡಿರುವುದಾಗಿ ಹೇಳಿಕೆ ನೀಡಿದ್ದು, ಇದೀಗ ಕೇರಳ ಸಿಎಂ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಈ ಪ್ರಕರಣದಲ್ಲಿ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಕೂಡ ಸಿಲುಕಿದ್ದಾರೆ.  ಬಂಧನಕ್ಕೊಳಗಾಗಿರುವ ಸ್ವಪ್ನಾ ಸುರೇಶ್, ಯುಎಇಯ ಹಿಂದಿನ ಕಾನ್ಸುಲ್ ಜನರಲ್ ಅವರೊಂದಿಗೆ ಮುಖ್ಯಮಂತ್ರಿಗಳ ನಿಕಟ ಸಂಪರ್ಕ ಮತ್ತು ಅಕ್ರಮ ವಿತ್ತೀಯ ವಹಿವಾಟುಗಳ ಬಗ್ಗೆ ಆಘಾತಕಾರಿ ಬಹಿರಂಗಪಡಿಸಿದ್ದಾರೆ.

ಕೇರಳ ವಿಧಾನಸಭೆ ಸ್ಪೀಕರ್ ಮತ್ತು ವಿಜಯನ್ ಕ್ಯಾಬಿನೆಟ್ ನ ಮೂವರು ಸದಸ್ಯರ ವಿರುದ್ಧ ಸುರೇಶ್ ಅಕ್ರಮ ವಿತ್ತೀಯ ವಹಿವಾಟು ನಡೆಸಿದ್ದಾರೆ. ಮುಂದಿನ ತಿಂಗಳು ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚೆಯೇ ಹೊರ ಬಿದ್ದಿದ್ದು,  ಕೇರಳ ರಾಜಕೀಯದಲ್ಲಿ ಆಡಳಿತ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳು ಕಂಡು ಬಂದಿವೆ.

ಇತ್ತೀಚಿನ ಸುದ್ದಿ

Exit mobile version