2:28 PM Wednesday 15 - October 2025

ವಿನಯ್ ಗುರೂಜಿ ಭೇಟಿಯ ಬಳಿಕ ನನ್ನ ಮಗ ಚೇತರಿಸಿಕೊಂಡಿದ್ದಾನೆ | ಡಿಸಿಎಂ ಗೋವಿಂದ ಕಾರಜೋಳ

27/02/2021

ಕೊಡಗು: ಅವದೂತ ವಿನಯ್ ಗುರೂಜಿಯ ಭೇಟಿಯ ಬಳಿಕ ವೆಂಟಿಲೇಟರ್ ನಲ್ಲಿದ್ದ ನನ್ನ ಮಗ ಚೇತರಿಸಿಕೊಂಡಿದ್ದಾನೆ. ಗುರೂಜಿಯನ್ನು ಭೇಟಿ ಮಾಡಲು ತಾನು ಬಂದಿದ್ದೇನೆ ಎಂದು  ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ಅವದೂತ ವಿನಯ್ ಗುರೂಜಿ ಅವರ ಆಶೀರ್ವಾದ  ಪಡೆಯಲು ಆಗಮಿಸಿದ ಅವರು, ನನ್ನ ಮಗ ಎರಡೂವರೆ ತಿಂಗಳು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೇ ವಿನಯ್ ಗುರೂಜಿ  ಬೆಂಗಳೂರಿಗೆ ಬಂದು ಭೇಟಿ ಮಾಡಿದ್ದರು ಎಂದು ಹೇಳಿದರು.

ನಿಮ್ಮ ಮಗನಿಗೆ ಏನೂ ಆಗುವುದಿಲ್ಲ. ದೇವರು ಒಳ್ಳೆಯದು ಮಾಡುತ್ತಾನೆ ಎಂದು ಆಶೀರ್ವಾದ ಮಾಡಿ ಹೋಗಿದ್ದರು. ಈಗ ನನ್ನ ಮಗ ಚೆನ್ನಾಗಿದ್ದಾನೆ. ಹಾಗಾಗಿ ಅವರ ದರ್ಶನಕ್ಕೆ  ಚಿಕ್ಕಮಗಳೂರಿಗೆ ಬಂದಿದ್ದೇನೆ. ಅವರ ಆಶೀರ್ವಾದ ಪಡೆಯುತ್ತೇನೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version