12:26 AM Saturday 23 - August 2025

ಹುಲಿ ಉಗುರಿನ ಪೆಂಡೆಂಟ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ: ಜಗ್ಗೇಶ್ ಭಾವನಾತ್ಮಕ ಪೋಸ್ಟ್

jaggesh
26/10/2023

ಬೆಂಗಳೂರು: ತಾಯಿ ವರ್ಜಿನಲ್ ಹುಲಿಯ ಉಗುರಿನ ಪೆಂಡೆಂಟ್ ಮಾಡಿಸಿಕೊಟ್ಟಿರುವ ಬಗ್ಗೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಜಗ್ಗೇಶ್ ಬಂಧನಕ್ಕೆ ನೆಟ್ಟಿಗರು ವ್ಯಾಪಕವಾಗಿ ಒತ್ತಾಯಿಸಿದ್ದರು.

ಜಗ್ಗೇಶ್ ಹುಲಿ ಉಗುರಿನ ಪೆಂಡೆಂಟ್ ಹೊಂದಿದ್ದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗ್ಗೇಶ್ ಅವರ ನಿವಾಸಕ್ಕೆ ಆಗಮಿಸಿ ಶೋಧ ನಡೆಸಿದ್ದರು. ಈ ವೇಳೆ ಜಗ್ಗೇಶ್ ಹುಲಿ ಉಗುರಿನ ಪೆಂಡೆಂಟ್ ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ.

ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಜಗ್ಗೇಶ್, ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ!,  ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ!, ಎಷ್ಟೋ ದೋಚುವ ಮನುಷ್ಯರು,  ಕೊಲೆ ಪಾತಕರು, ದೇಶದ್ರೋಹಿಗಳು,ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ!ಪಾಚ್ಕೊಳಿ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದೆಡೆ, ಬಿಗ್ ಬಾಸ್ ಸ್ಪರ್ಧಿಯನ್ನು ಹುಲಿ ಉಗುರು ಹೊಂದಿದ್ದಕ್ಕೆ ಬಂಧಿಸಲಾಗಿದೆ. ಆದ್ರೆ, ಸೆಲೆಬ್ರೆಟಿಗಳನ್ನು, ಜಗ್ಗೇಶ್ ರಂತವರ ಬಂಧನ ಯಾಕಿಲ್ಲ, ಒಂದೇ ರೀತಿಯ ಪ್ರಕರಣಕ್ಕೆ 2 ರೀತಿಯ ಕ್ರಮವನ್ನ ಅಧಿಕಾರಿಗಳು ಹೇಗೆ ಕೈಗೊಳ್ಳುತ್ತಿದ್ದಾರೆ ಎನ್ನುವಂತಹ ಪ್ರಶ್ನೆಗಳೂ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ

Exit mobile version