ತಾನು ನೆಟ್ಟ ಗಿಡಕ್ಕೆ ಪುನೀತ್ ರಾಜ್ ಕುಮಾರ್ ಎಂದು ಹೆಸರಿಟ್ಟ ತಮಿಳು ನಟ ವಿಶಾಲ್
ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ನಟ ವಿಶಾಲ್ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ನಟರಾಗಿದ್ದಾರೆ. ನಿರ್ಗತಿಕರಿಗೆ ಸಹಾಯ ಮಾಡುವ ಸಾಮಾಜಿಕ ಕೆಲಸಗಳನ್ನು ವಿಶಾಲ್ ಅವರು ಮಾಡುತ್ತಿದ್ದಾರೆ. ಬೆಂಗಳೂರು ಮೂಲದ ಈ ನಟ ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.
ಸದ್ಯ ನಟ ವಿಶಾಲ್ ಅವರ ಎನಿಮಿ ಚಿತ್ರ ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಅವರು ಚಿತ್ರದ ಪ್ರಚಾರದಲ್ಲಿ ಕೂಡ ತೊಡಗಿದ್ದಾರೆ. ಪ್ರಚಾರದ ನಡುವೆ ಅವರು ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಭಾಗಿಯಾಗಿ ಒಂದು ಗಿಡ ನೆಟ್ಟಿದ್ದಾರೆ. ಈ ಗಿಡಕ್ಕೆ ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನಿಟ್ಟಿದ್ದಾರೆ.
ಪುನೀತ್ ರಾಜ್ ಕುಮಾರ್ ಮೇಲೆ ಬಹಳಷ್ಟು ಪ್ರೀತಿ ವಿಶ್ವಾಸ ಹೊಂದಿರುವ ನಟ ವಿಶಾಲ್, ಪುನೀತ್ ಕುಮಾರ್ ಅವರ ನಿಧನರಾದ ಬಳಿಕ, ಪುನೀತ್ ಅವರ ಜವಾಬ್ದಾರಿಯನ್ನು ಮುಂದೆ ನಾನು ಹೊರುತ್ತೇನೆ ಎಂದು ಮುಂದೆ ಬಂದಿದ್ದರು. ನಟ ಪುನೀತ್ ರಾಜ್ ಕುಮಾರ್ ಅವರು 1800 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು. ಮುಂದಿನ ವರ್ಷದಿಂದ ಈ ಜವಾಬ್ದಾರಿ ನನ್ನದು ಎಂದು ನಟ ವಿಶಾಲ್ ಘೋಷಿಸಿದ್ದರು.
ವಿಶಾಲ್ ಹಾಗೂ ಆರ್ಯ ನಟನೆಯ ಎನಿಮಿ ಚಿತ್ರ ಈ ದೀಪಾವಳಿಗೆ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಆನಂದ್ ಶಂಕರ್ ನಿರ್ದೇಶಿಸಿದ್ದಾರೆ. ಸದ್ಯ ಅವರು ಮಾಧ್ಯಮ ಸಂದರ್ಶನಕ್ಕಾಗಿ ಚಿತ್ರ ತಂಡದೊಂದಿಗೆ ಹೈದರಾಬಾದ್ ಗೆ ತೆರಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























