6:35 PM Thursday 16 - October 2025

ವಿವಾಹೇತರ ತ್ರಿಕೋನ ಸಂಬಂಧ ಪ್ರಾಣಕ್ಕೆ ಮುಳುವಾಯಿತು | ಪ್ರೇಯಸಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

21/02/2021

ಬಾಗಲಕೋಟೆ: 22 ವರ್ಷದ ಯುವಕನೋರ್ವ ತನ್ನ ಪ್ರೇಯಸಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲೂರ ಗ್ರಾಮದ ಬಳಿಯಲ್ಲಿ ನಡೆದಿದೆ.

23 ವರ್ಷದ ಮಹಿಳೆ ಬಾಳವ್ವ ಸಿದ್ದಪ್ಪ ಬಂಡೆಪ್ಪನವರ್ ಹತ್ಯೆಯಾದ ಮಹಿಳೆಯಾಗಿದ್ದಾಳೆ.  ಬಾಳವ್ವನಿಗೆ ಮದುವೆಯಾಗಿ 3 ಮಕ್ಕಳಿದ್ದರೂ, 22 ವರ್ಷದ ವಯಸ್ಸಿನ ವಿವಾಹಿತ  ಮಂಜಪ್ಪ ಹನುಮಪ್ಪ ಐಹೊಳೆ ಎಂಬಾತನ  ಜೊತೆಗೆ  ಸಂಬಂಧವಿತ್ತು ಎಂದು ಹೇಳಲಾಗಿದೆ. ಇದೇ ಹತ್ಯೆಗೆ ಹಾಗೂ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.

ಮಂಜಪ್ಪ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಪತ್ನಿಗೆ  ಹೆರಿಗೆಯಾಗಿದ್ದು, ಮಗುವನ್ನು ನೋಡಿಕೊಂಡು ಹೋಗಲು ಕೆಲೂರು ಗ್ರಾಮಕ್ಕೆ  ಬಂದಿದ್ದಾನೆ. ಬಳಿಕ ಅಲ್ಲಿಂದ ಪ್ರೇಯಸಿಯನ್ನು ನೋಡಲು ತೆರಳಿದ್ದಾನೆ.  ಈ ವೇಳೆ ಬಾಳವ್ವ ಮತ್ತೋರ್ವನ ಜೊತೆಗೆ ಸಂಬಂಧ ಹೊಂದಿರುವುದು ಪತ್ತೆಯಾಗಿದ್ದು, ಇದರಿಂದ ರೊಚ್ಚಿಗೆದ್ದ ಮಂಜಪ್ಪ,  ಬಾಳವ್ವನನ್ನು  ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದು, ಬಳಿಕ ತಾನೂ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇತ್ತೀಚಿನ ಸುದ್ದಿ

Exit mobile version