4:37 AM Wednesday 15 - October 2025

ವ್ಲಾಡಿಮಿರ್‌ ಪುಟಿನ್‌ ತೆಗೆದುಕೊಳ್ಳುವ ಮುಂದಿನ ನಿರ್ಧಾರವೇನು? | ಯುದ್ಧ ಮತ್ತೆ ಆರಂಭವಾಗುತ್ತಾ?

vladimir putin
07/03/2022

ಮಾಸ್ಕೋ: ಉಕ್ರೇನ್-ರಷ್ಯಾ ಕದನ ವಿರಾಮದ ಬಳಿಕ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಮಹತ್ವದ ಸಮಾಲೋಚನೆ ನಡೆಸಿದ್ದು, ಈ ವೇಳೆ ಮುಂದಿನ ನಡೆಯ ಬಗ್ಗೆ ವ್ಲಾಡಿಮಿರ್‌ ಪುಟಿನ್‌ ಸ್ಪಷ್ಟನೆ ನೀಡಿದ್ದಾರೆ.

ಟಿಎಎಸ್‌ಎಸ್‌ ಮಾಧ್ಯಮದ ವರದಿಯ ಪ್ರಕಾರ, ಪುಟಿನ್ ತಮ್ಮ ಸ್ಪಷ್ಟ ನಿಲುವನ್ನು ಪ್ರಕಟ ಪಡಿಸಿದ್ದು, ನಮ್ಮ ಬೇಡಿಕೆ ಈಡೇರಿಸಿದರೆ,  ಮಿಲಿಟರಿ ಕಾರ್ಯಾಚರಣೆಯನ್ನು ನಾವು ನಿಲ್ಲಿಸುತ್ತೇವೆ. ಇಲ್ಲವಾದರೆ, ಮತ್ತೆ ಹಿಂದಿನ ಸ್ಥಿತಿ ಮರುಕಳಿಸುತ್ತದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ಉಕ್ರೇನ್‌ ಬಂಡುಕೋರರ ಹಿಡಿತದಲ್ಲಿರುವ ಡಾನ್‌ ಬಾಸ್‌ ಅನ್ನು ರಕ್ಷಿಸುವುದು ಮತ್ತು ಮುಖ್ಯ ಉದ್ದೇಶಗಳ ಈಡೇರಿಕೆಗಾಗಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಪ್ರಗತಿಯ ಬಗ್ಗೆ ಪುಟಿನ್‌ ವಿವರಿಸಿದರು ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನೂ ಫ್ರೆಂಚ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಜೊತೆಗೆ ಕೂಡ ಈ ವಿಚಾರವಾಗಿ ಒಂದು ಗಂಟೆಗಳ ಕಾಲ ಪುಟಿನ್ ಮಾತುಕತೆ ನಡೆಸಿದ್ದಾರೆ.  ಮಾರಿಯುಪೋಲ್‌ನಿಂದ ನಾಗರಿಕರನ್ನು ಸ್ಥಳಾಂತರ ಮಾಡಲು ಉಕ್ರೇನ್‌ ವಿಫಲವಾಗಿದೆ ಎಂದು ಪುಟಿನ್‌ ಆರೋಪಿಸಿದ್ದಾರೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಟೀಚರ್ ವಿರುದ್ಧ ದೂರು ಕೊಡಲು ಪೊಲೀಸ್ ಠಾಣೆಗೆ ಬಂದ 2ನೇ ತರಗತಿಯ ವಿದ್ಯಾರ್ಥಿ

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ: ಅಮಿತ್ ಶಾ ವಿಶ್ವಾಸ

ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಡ್ರಗ್ಸ್​ ದಂಧೆ: ವಿದೇಶಿ ಪ್ರಜೆಗಳು ಸೇರಿ ನಾಲ್ವರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

Exit mobile version