12:23 PM Thursday 11 - December 2025

ಕೇಂದ್ರ ಸರ್ಕಾರದ ಟೀ, ತಿಂಡಿ, ಊಟವನ್ನು ತಿರಸ್ಕರಿಸಿ ಸ್ವಾಭಿಮಾನ ಮೆರೆದ ರೈತ ಮುಖಂಡರು

03/12/2020

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನನ್ನು ವಿರೋಧಿಸಿ ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಚಳವಳಿಯಲ್ಲಿ ರೈತರು ಕೇಂದ್ರ ಸರ್ಕಾರದ ಊಟ, ತಿಂಡಿ, ಚಹಾಗಳನ್ನು ತಿರಸ್ಕರಿಸುವ ಮೂಲಕ ಸ್ವಾಭಿಮಾನ ಮೆರದಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ  ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರವು ರೈತ ಮುಖಂಡರನ್ನು ಸಂಧಾನಕ್ಕೆ ಕರೆದಿತ್ತು.  ಸಭೆಯ ಸಂದರ್ಭದಲ್ಲಿ ಸರ್ಕಾರದ ಟೀ, ತಿಂಡಿ, ಊಟವನ್ನು ಅವರು ತಿರಸ್ಕರಿಸಿದ್ದು, ನೀವು ಕೊಡುವ ಯಾವುದೇ ವಸ್ತುಗಳು ನಮಗೆ ಬೇಡ. ನಮ್ಮ ಊಟವನ್ನು ನಾವು ತಂದಿದ್ದೇವೆ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ರೈತರ ಪ್ರತಿಭಟನೆ 8ನೇ ದಿನವೂ ಮುಂದುವರಿದೆ. ಇದೇ ಸಂದರ್ಭದಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ರೈತ ಮುಖಂಡರ ಜೊತೆಗೆ ಸರ್ಕಾರ ಮಾತುಕತೆಗೆ ಮುಂದಾಗಿತ್ತು.

ನೂತನ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎನ್ನುವ ಒಂದು ಮಾತಲ್ಲದೇ ಬೇರಾವುದೇ ಮಾತುಗಳಿಗೆ ರೈತ ಮುಖಂಡರು ಸರ್ಕಾರದ ಜೊತೆಗೆ ಮುಂದಾಗುತ್ತಿಲ್ಲ. ಸರ್ಕಾರದ ಯಾವುದೇ ಅಡ್ಜೆಸ್ಟ್ ಮಂಟ್ ಗಳಿಗೆ ರೈತರು ಒಪ್ಪಿಗೆ ನೀಡುತ್ತಿಲ್ಲ. ಇದು ಸರ್ಕಾರಕ್ಕೆ ತೀವ್ರ ತಲೆನೋವು ತಂದಿದೆ.




 

ಇತ್ತೀಚಿನ ಸುದ್ದಿ

Exit mobile version