ಮದುವೆಯಾಗದ ಹುಡುಗರಿಗೆ ಮದುವೆ ಮಾಡಿಸ್ತೇವೆ: ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆ ವೈರಲ್!
ಬೆಳಗಾವಿ: ವಿವಿಧ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಘೋಷಿಸಿವೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು ಪ್ರಣಾಳಿಕೆಯಲ್ಲಿ ವಿವಿಧ ಭರವಸೆಗಳನ್ನು ನೀಡಿದೆ. ಆದರೆ ಇಲ್ಲೊಬ್ಬರು ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆಯು ಮದುವೆಯಾಗದೇ ಬಾಕಿ ಉಳಿದಿರುವ ಹುಡುಗರ ಮೊಗದಲ್ಲಿ ಮುಗುಳ್ನುಗು ಮೂಡುವಂತೆ ಮಾಡಿದೆ.
ಹೌದು…! ಬೆಳಗಾವಿ ಜಿಲ್ಲೆ ಅರಭಾವಿ ವಿಧಾನ ಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಹಾಗೂ ಗೋಕಾಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ವಧು ವರರಿಗೆ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದು, ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
ಈ ಪ್ರಣಾಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭ್ಯರ್ಥಿಗಳಿಗೆ ಭಾರೀ ಪ್ರಚಾರ ಕೂಡ ದೊರಕಿದೆ. ಗುರುಪುತ್ರ ಕುಳ್ಳೂರ ಹಾಗೂ ಪುಂಡಲೀಕ ಕುಳ್ಳೂರ ಇಬ್ಬರೂ ಸಹೋದರರಾಗಿದ್ದಾರೆ. ಇವರು ಪ್ರತ್ಯೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























