5:25 PM Monday 15 - September 2025

ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡ ಜೋಡಿಗೆ ನೆಟ್ಟಿಗರು ಹೇಳಿದ್ದೇನು?

video viral
08/07/2024

ಸಾಮಾಜಿಕ ಜಾಲತಾಣದ ಕ್ರೇಜ್ ಜನರನ್ನು ಬಿಟ್ಟೂ ಬಿಡದಂತೆ ಕಾಡುತ್ತಿದೆ.  ಸಾಕಷ್ಟು ಜನರು ರೀಲ್ಸ್, ಸಾಮಾಜಿಕ ಜಾಲತಾಣದ ಹುಚ್ಚಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ, ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇಲ್ಲೊಂದು ಜೋಡಿ ಇದೆಲ್ಲ ದಾಖಲೆಯನ್ನು ಮುರಿದು ತಮ್ಮ ಮೊದಲ ರಾತ್ರಿಯ ವಿಡಿಯೋವನ್ನೇ ಅಪ್ ಲೋಡ್ ಮಾಡಿ ಬಿಟ್ಟಿದ್ದಾರೆ.

ರಿಲ್ಸ್ ಆಸೆಗೆ ಬಲಿಯಾಗಿದ್ದ ಈ ಇಬ್ಬರು ಜೋಡಿಗಳು ಮದುವೆಯ ದಿನದ ರಾತ್ರಿಯಂದು ಫಸ್ಟ್ ನೈಟ್ ವಿಡಿಯೋ ಮಾಡಿ ರೀಲ್ಸ್ ನಲ್ಲಿ ಹಾಕಿದ್ದಾರೆ. ಇಬ್ಬರೂ ಇತ್ತೀಚೆಗೆ ಮದುವೆಯಾಗಿದ್ದಾರೆ. ಫಸ್ಟ್ ನೈಟ್ ಮುಗಿದ ಬಳಿಕ ಕೊಠಡಿಯ ವಿಡಿಯೋ ಮಾಡಿ ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ವರನು ವಧುವನ್ನು ಕೇಳುತ್ತಾನೆ, ಫಸ್ಟ್ ನೈಟ್ ಹೇಗಿತ್ತು..ಅಂತ?, ಇದಕ್ಕೆ ಮದುಮಗಳು ಚೆನ್ನಾಗಿತ್ತು ಅಂತ ಹೇಳುತ್ತಾಳೆ, ಬಳಿಕ ಇಬ್ಬರು ಕೂಡ ಹಾಸಿಗೆಯ ಮೇಲಿದ್ದ ಅಲಂಕಾರವನ್ನು ತೋರಿಸಲು ಮುಂದಾಗುತ್ತಾರೆ. ಈ ವಿಡಿಯೋವನ್ನು ಸುನಂದಾ ರಾಯ್ ಅನ್ನುವ ಮಹಿಳೆ ಹಂಚಿಕೊಂಡಿದ್ದಾರೆ. ಈ ಫಸ್ಟ್ ನೈಟ್ ವಿಡಿಯೋ ವೈರಲ್ ಆಗುತ್ತಿದೆ.

ಅನೇಕ ಜನರು ಈ ವಿಡಿಯೋ ಕಂಡು ಸಾಮಾಜಿಕ ಜಾಲತಾಣ ಎಲ್ಲವನ್ನೂ ಬದಲಿಸುತ್ತಿದೆ ಎಂದು ಹೇಳಿದ್ದಾರೆ. ಸಾಕಷ್ಟು ಜನರು ಜೋಡಿಯನ್ನು ನಿಂದಿಸಿದ್ದು, ಅಸಭ್ಯ ಕಾಮೆಂಟ್ ಗಳನ್ನು ಹಾಕಿದ್ದಾರೆ. ನಿಮಗೆ ಮಾನ ಮರ್ಯಾದೆ ಇಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಜೋಡಿಯ ದಾಖಲೆಯನ್ನು ಮುರಿಯಲು ಇನ್ನೇನು ವಿಡಿಯೋಗಳು ಬರುತ್ತವೋ ಎನ್ನುವ ಆತಂಕವನ್ನು ವಿಡಿಯೋ ವೀಕ್ಷಿಸಿದ ಕೆಲವರು ವ್ಯಕ್ತಪಡಿಸಿರುವುದು ಕಂಡು ಬಂತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version