ಟಿಶ್ಯೂ ಪೇಪರ್ ಕೇಳಿದ್ದಕ್ಕೆ ಯುವಕರನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದ ಪಾನ್ ಶಾಪ್ ಮಾಲಿಕ

manvi
29/10/2023

ರಾಯಚೂರು: ಟಿಶ್ಯೂ ಪೇಪರ್ ವಿಚಾರಕ್ಕೆ ಸಂಬಂಧಿಸಿದಂತೆ ಪಾನ್ ಶಾಪ್ ಮಾಲಿಕ ಇಬ್ಬರು ಯುವಕರನ್ನು ಅಟ್ಟಾಡಿಸಿ ಚಾಕುವಿನಿಂದ ಇರಿದಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದಿದೆ.

ರಮೇಶ್ ಹಾಗೂ ಸತ್ತರ್ ಎಂಬವರು ಚಾಕು ಇರಿತಕ್ಕೊಳಗಾದ ಯುವಕರಾಗಿದ್ದಾರೆ. ಪಾನ್ ಶಾಪ್ ಮಾಲಿಕ ವಿರೇಶ್ ಚಾಕುವಿನಿಂದ ಇರಿದ ಆರೋಪಿಯಾಗಿದ್ದಾನೆ.

ರಮೇಶ್ ಹಾಗೂ ಸತ್ತರ್ ಸ್ನೇಹಿತರ ಜೊತೆಗೆ ಡಾಬಾದಲ್ಲಿ ಊಟ ಮಾಡಿದ್ದಾರೆ. ಈ ವೇಳೆ ವೇಟರ್ ಅಂದು ಕೊಂಡು ವೀರೇಶ್ ಬಳಿ ವೇಟರ್ ಟಿಶ್ಯೂ ಪೇಪರ್ ಕೊಡು ಎಂದು ಕೇಳಿದ್ದರು. ಇದೇ ಗಲಾಟೆಗೆ ಕಾರಣವಾಗಿತ್ತು.

ಒಂದು ಹಂತದಲ್ಲಿ ತೀವ್ರವಾಗಿ ಕ್ರೋಧಗೊಂಡ ವೀರೇಶ್ ಈರುಳ್ಳಿ ಕತ್ತರಿಸಲು ಇಟ್ಟಿದ್ದ ಚಾಕುವಿನಿಂದ ಇಬ್ಬರು ಯುವಕರಿಗೆ ಅಟ್ಟಾಡಿಸಿ ಇರಿದಿದ್ದಾನೆ. ಚಾಕು ಇರಿತದಿಂದ ಇಬ್ಬರು ಯುವಕರಿಗೂ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುಗಳಿಗೆ ಮಾನ್ವಿ ಹಾಗೂ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವೀರೇಶ್ ನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version