ತಂದೆ ಕಾರು ವಾಶ್ ಮಾಡುತ್ತಿದ್ದ ವೇಳೆ ಕಾರು ಹತ್ತಿ ಎಕ್ಸಿಲೇಟರ್ ತುಳಿದ ಮಗ: ನಡೆಯಿತು ಅನಾಹುತ!

arav
12/05/2024

ಬೆಂಗಳೂರು: ತಂದೆ ಕಾರು ವಾಶ್ ಮಾಡುತ್ತಿದ್ದ ವೇಳೆ 15 ವರ್ಷದ ಬಾಲಕ ಕಾರು ಹತ್ತಿ ಎಕ್ಸಿಲೇಟರ್ ತುಳಿದಿದ್ದು, ಪರಿಣಾಮ ಕಾರು ಮುಂದೆ ಚಲಿಸಿ 5 ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆ ಮುರುಗೇಶಪಾಳ್ಯ ರಸ್ತೆಯಲ್ಲಿ ನಡೆದಿದೆ.

ಆರವ್(5) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ತಂದೆ ಕಾರು ವಾಶ್ ಮಾಡುತ್ತಿದ್ದ ವೇಳೆ 15 ವರ್ಷದ ಬಾಲಕ ಕಾರು ಹತ್ತಿ ಎಕ್ಸಿಲೇಟರ್ ತುಳಿದಿದ್ದು,  ಪರಿಣಾಮವಾಗಿ ಕಾರು ಮುಂದೆ ಚಲಿಸಿ, ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದಿದೆ.  ಪರಿಣಾಮವಾಗಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ಮಣಿಪಾಲ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಆಸ್ಪತ್ರೆ ಮುಂದೆ ಮಗುವಿನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಣ್ಣದೊಂದು ಯಡವಟ್ಟಿನಿಂದ ದೊಡ್ಡ ಅನಾಹುತವೇ ನಡೆದುಹೋಗಿದೆ. ಮಗುವಿಗೆ ರಭಸವಾಗಿ ಡಿಕ್ಕಿಯಾದ ನಂತರ ಕಾರು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳಿಗೂ ಡಿಕ್ಕಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version