11:30 PM Thursday 21 - August 2025

ನಿತ್ಯ ಗಂಗಾ ಆರತಿ ಮಾಡುವ ಯುವಕ: ಮೊದಲ ಪ್ರಯತ್ನದಲ್ಲೇ ನೀಟ್ ಪರೀಕ್ಷೆಯಲ್ಲಿ ಪಾಸ್

15/06/2023

ಉತ್ತರ ಪ್ರದೇಶದ ಬದೌನ್ ನ 17 ವರ್ಷದ ಬಾಲಕ ವಿಭು ಉಪಾಧ್ಯಾಯ ಎಂಬ ಯುವಕ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಯಲ್ಲಿ 720 ರಲ್ಲಿ 662 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ.

ಇವರು ತಮ್ಮ ಯಶಸ್ಸಿಗೆ ಅವರ ಕಠಿಣ ಪರಿಶ್ರಮ ಹಾಗೂ ಗಂಗಾ ಆರತಿಯೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಉಪಾಧ್ಯಾಯ ಇವರ ಜೀವನ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ನಂಬಿಕೆಯು ಯಾವುದೇ ಅಡೆತಡೆಯನ್ನು ನಿವಾರಿಸಲು ನಿಮಗೆ ಸಹಾಯ ಮಾಡಬಲ್ಲದು ಎಂಬುದನ್ನು ಇದು ತೋರಿಸುತ್ತದೆ.

ಉತ್ತರ ಪ್ರದೇಶದ ಬದೌನ್ ಜಿಲ್ಲೆಯವರಾದ ವಿಭು, ತಾನು ವೈದ್ಯ ಆಗಲು ಬಯಸಿದ್ದೆ. ಇದಕ್ಕಾಗಿ 9 ನೇ ತರಗತಿಯಲ್ಲಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದ್ದೆ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇವರು ನೀಟ್ ಪರೀಕ್ಷೆಯಲ್ಲಿ 720 ರಲ್ಲಿ ಸುಮಾರು 662 ಅಂಕಗಳನ್ನು ಪಡೆದು ಅಗ್ರ ಶ್ರೇಯಾಂಕದಲ್ಲಿ ಪಾಸ್ ಆಗಿದ್ದಾರೆ.

ವಿಭು ಒಬ್ಬ ಕಟ್ಟಾ ಧಾರ್ಮಿಕ ಭಕ್ತ. ಇವರು ನಿತ್ಯ ಗಂಗಾ ಆರತಿಯನ್ನು ಮಾಡುತ್ತಾರೆ. ಇವರು ಸಮಯ ಸಿಕ್ಕಾಗಲೆಲ್ಲಾ ಆರತಿ ಮಾಡಲು ಹೋಗುತ್ತಾರೆ. ಮತ್ತು ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version