12:42 AM Saturday 13 - December 2025

ಬೇರೆ ಮಹಿಳೆ ಜೊತೆ ಲಾಡ್ಜ್ ನಲ್ಲಿ ಸಿಕ್ಕಿ ಬಿದ್ದ ಪತಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ!

belagavi
29/10/2025

ಬೆಳಗಾವಿ:  ಲಾಡ್ಜ್ ನಲ್ಲಿ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪತಿಗೆ ಪತ್ನಿ ಸಾರ್ವಜನಿಕ ಸ್ಥಳದಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.

ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಚಿಕ್ಕೋಡಿ ನಿವಾಸಿ ಅವಿನಾಶ್ ಭೋಸಲೆ ಎಂಬಾತ ರೂಂ ಬುಕ್ ಮಾಡಿ ಪ್ರೇಯಸಿ ಜೊತೆ ತಂಗಿದ್ದನು ಎನ್ನಲಾಗಿದೆ.

ಈ ವಿಷಯ ಗೊತ್ತಾದ ಕೂಡಲೇ ಪತ್ನಿ ಲಾಡ್ಜ್ ಗೆ ಬಂದಿದ್ದು ಪತಿಯನ್ನು ನೋಡಿ ಆಕ್ರೋಶಗೊಂಡಿದ್ದಾಳೆ. ಕೂಡಲೇ ಆತನನ್ನು ಅಲ್ಲಿಂದ ಹೊರಗೆ ಎಳೆದೊಯ್ದು ಚಪ್ಪಲಿಯಿಂದ ಥಳಿಸಿದ್ದಾಳೆ.

ಈ ದೃಶ್ಯವನ್ನು ಸಾರ್ವಜನಿಕರು ನಿಂತುಕೊಂಡು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಹಿಳೆಯನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version