5:10 AM Wednesday 22 - October 2025

ಶಾಸಕರ ಊರಿಗೆ ಎಂಟ್ರಿಕೊಟ್ಟ ಕಾಡಾನೆಗಳು!

elephant
11/06/2025

ಚಿಕ್ಕಮಗಳೂರು:   ಮಲೆನಾಡಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಇದೀಗ ಬಾಸಾಪುರ ಗ್ರಾಮ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಸ್ವಗ್ರಾಮಕ್ಕೆ ಕಾಡಾನೆ ಬಂದಿದೆ.

ಕಾಡಾನೆಗೆ ಅದೇನು ಅಹವಾಲು ಇತ್ತೋ ಗೊತ್ತಿಲ್ಲ, ಶಾಸಕರ ಊರನ್ನ ಹುಡುಕಿಕೊಂಡು ನೇರವಾಗಿ ಬಂದಿದ್ದು,  ಬಾಸಾಪುರ ಗ್ರಾಮದಲ್ಲಿ ಸದ್ಯ 10ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ.

ಚಿಕ್ಕಮಗಳೂರು ಜಿಲ್ಲೆಯ ಬಾಸಾಪುರ, ಕಾಡ್ ಬೈಲು ಗ್ರಾಮದಲ್ಲಿ ಕಾಡಾನೆಗಳ ದಾಂಧಲೆ ನಡೆಸಿದ್ದು, ಕಾಫಿತೋಟವನ್ನು ನಾಶ ಮಾಡುವ ಕೆಲಸ ಆನೆಗಳು ಮುಂದುವರಿಸಿವೆ.

ಇನ್ನೂ ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿರುವ ಕಾಫಿತೋಟದ ಮಾಲಿಕರು, ಸ್ಥಳೀಯರು ಕಾಡಾನೆಗಳ ಸ್ಥಳಾಂತರಕ್ಕೆ ನಿರಂತರವಾಗಿ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಮತ್ತೊಮ್ಮೆ ಕಾಡಾನೆ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version