ಬಡವರಿಗೆ ವಿಸ್ಕಿ, ಬಿಯರ್ ನೀಡುತ್ತೇನೆ: ಸ್ವತಂತ್ರ ಅಭ್ಯರ್ಥಿಯಿಂದ ಹೀಗೊಂದು ಚುನಾವಣಾ ಭರವಸೆ..!

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಚಿಮೂರ್ ಗ್ರಾಮದ ಸ್ವತಂತ್ರ ಅಭ್ಯರ್ಥಿ ವನಿತಾ ರಾವತ್ ಎಂಬುವವರು 2024 ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಸಬ್ಸಿಡಿ ದರದಲ್ಲಿ ವಿಸ್ಕಿ ಮತ್ತು ಬಿಯರ್ ನೀಡುವುದಾಗಿ ಚುನಾವಣಾ ಭರವಸೆ ನೀಡಿದ್ದಾರೆ. ಅಖಿಲ ಭಾರತ ಮಾನವತಾ ಪಕ್ಷದ ಅಭ್ಯರ್ಥಿ ವನಿತಾ ರಾವತ್ ಅವರು ತಮ್ಮ ಬಡ ಮತದಾರರಿಗೆ ಅಸಾಂಪ್ರದಾಯಿಕ ಚುನಾವಣಾ ಭರವಸೆಯೊಂದಿಗೆ ಸ್ಪರ್ಧೆಗಿಳಿದಿದ್ದಾರೆ.
ವನಿತಾ ರಾವತ್ ಅವರು ಈ ಕ್ಷೇತ್ರದಿಂದ ಆಯ್ಕೆಯಾದರೆ ಪ್ರತಿ ಹಳ್ಳಿಯಲ್ಲಿ ಬಿಯರ್ ಬಾರ್ ಗನ್ನು ತೆರೆಯುವುದಲ್ಲದೇ ಸಂಸದರ ನಿಧಿಯಿಂದ ಬಡವರಿಗೆ ಉಚಿತವಾಗಿ ಆಮದು ಮಾಡಿದ ವಿಸ್ಕಿ ಮತ್ತು ಬಿಯರ್ ನೀಡುವುದಾಗಿ ಹೇಳಿದ್ದಾರೆ.
ಎಲ್ಲಿ ಹಳ್ಳಿ ಇದೆಯೋ ಅಲ್ಲಿ ಬಿಯರ್ ಬಾರ್ ಇದೆ. ಇವು ನನ್ನ ಚುನಾವಣಾ ವಿಷಯಗಳು ಎಂದು ವನಿತಾ ರೌತ್ ಇಂಡಿಯಾ ಟುಡೇ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಪಡಿತರ ವ್ಯವಸ್ಥೆಯ ಮೂಲಕ ಆಮದು ಮಾಡಿದ ಮದ್ಯದ ಭರವಸೆ ನೀಡಿದ ರಾವತ್, ಕುಡುಕ ಮತ್ತು ಮಾರಾಟಗಾರ ಪರವಾನಗಿ ಹೊಂದಿರಬೇಕು ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth