ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ: ಜೀವ ಉಳಿಸಿಕೊಳ್ಳಲು ಸತತವಾಗಿ ಪ್ರಯತ್ನಿಸಿದ್ದ ಗುರುತು ಪತ್ತೆ
ಚಿಕ್ಕಮಗಳೂರು: ಮಹಿಳೆಯೊಬ್ಬರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಲ್ದೂರು ಸಮೀಪದ ಅರೆನೂರು ಗ್ರಾಮದಲ್ಲಿ ನಡೆದಿದೆ.
ಸಂಧ್ಯಾ (33) ಹತ್ಯೆಯಾದ ಮಹಿಳೆಯಾಗಿದ್ದಾರೆ. ತನ್ನ ಮನೆಯ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಹಂತಕ ಕತ್ತು ಸೀಳಿ ಎಸ್ಕೇಪ್ ಆಗಿರುವ ಶಂಕೆ ಮೂಡಿದೆ. ಕತ್ತು ಸೀಳಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂಧ್ಯಾ ಬದುಕುವ ಪ್ರಯತ್ನವಾಗಿ ಗೋಡೆ ಹಿಡಿದ ಏಳಲು ಯತ್ನಿಸಿರುವುದು ಮತ್ತು ಮನೆಯಲ್ಲಿ ಅಲ್ಲಲ್ಲಿ ರಕ್ತ ಚೆಲ್ಲಿರುವ ಗುರುತುಗಳು ಪತ್ತೆಯಾಗಿದೆ. ಗೋಡೆಯ ಮೇಲೆ ಸಂಧ್ಯಾ ಅವರ ಬೆರಳಿನ ಗುರುತು ಪತ್ತೆಯಾಗಿದೆ.
ಮೃತ ಸಂಧ್ಯಾ ಗಂಡನ ಮನೆ ಬಿಟ್ಟು, ತನ್ನ ತವರು ಮನೆ ಸೇರಿದ್ದರು. ಕಳೆದ ನಾಲ್ಕು ದಿನಗಳಿಂದ ಅವರು ನಾಪತ್ತೆಯಾಗಿದ್ದರು. ಹೀಗಾಗಿ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ಆದ್ರೆ, ನಿನ್ನೆ ಸಂಜೆ ಅರೆನೂರು ಗ್ರಾಮದ ಮನೆಗೆ ಸಂಧ್ಯಾ ವಾಪಸ್ ಆಗಿದ್ದರು. ಇಂದು ಬರ್ಬರವಾಗಿ ಹತ್ಯೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ, ಪೊಲೀಸರ ತನಿಖೆಯ ನಂತರ ಹೆಚ್ಚಿನ ಮಾಹಿತಿಗಳು ಬಯಲಾಗಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























