12:40 AM Thursday 21 - August 2025

ಮಳೆಯ ಆವಾಂತರಕ್ಕೆ ಚರಂಡಿಯಲ್ಲಿ ಮುಳುಗಿ ಮಹಿಳೆ ಸಾವು: ಒಂದು ಗಂಟೆಯ ನಂತರ ಶವ ಪತ್ತೆ

26/09/2024

ಮುಂಬೈನ ಅಂಧೇರಿ ಪೂರ್ವದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ತೆರೆದ ಚರಂಡಿಯಲ್ಲಿ 45 ವರ್ಷದ ಮಹಿಳೆ ಮುಳುಗಿ ಸಾವನ್ನಪ್ಪಿದ್ದಾರೆ.

ವಿಮಲ್ ಗಾಯಕ್ವಾಡ್ (45) ಎಂಬ ಮಹಿಳೆ ಅಂಧೇರಿ ಪೂರ್ವದ ಎಂಐಡಿಸಿ ಪ್ರದೇಶದಲ್ಲಿ ಸುಮಾರು 100 ಮೀಟರ್ ದೂರಕ್ಕೆ ಕೊಚ್ಚಿ ಹೋಗಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯ ನಂತರ ಆಕೆಯ ದೇಹವನ್ನು ಪತ್ತೆ ಮಾಡಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.

ಕೂಡಲೇ ಮಹಿಳೆಯನ್ನು ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.‌ಆದರೆ ಅಲ್ಲಿ ವೈದ್ಯರು ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ.

ಬುಧವಾರ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸ್ಥಳೀಯ ರೈಲುಗಳು ಹಳಿಗಳಲ್ಲಿ ಸ್ಥಗಿತಗೊಂಡಿದ್ದು ಅತ್ತ ಕನಿಷ್ಠ 14 ಒಳಬರುವ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.

ಮುಂಬೈನ ಹಲವಾರು ಪ್ರದೇಶಗಳಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದೆ. ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಮುಲುಂಡ್ ನ ವೀಣಾ ನಗರ 104 ಎಂಎಂ, ಭಾಂಡುಪ್ 120 ಎಂಎಂ, ಪೊವೈ 145 ಎಂಎಂ, ಚೆಂಬೂರ್ 162 ಎಂಎಂ ಮತ್ತು ಗೋವಂಡಿ 167 ಎಂಎಂ ದಾಖಲಾಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಬೈಗೆ ರೆಡ್ ಅಲರ್ಟ್ ನೀಡಿದ್ದು, ಗುರುವಾರ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version