5:44 AM Wednesday 20 - August 2025

ಬಾಡಿಗೆ ಹಣ ಕೇಳುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ದೂರು ದಾಖಲು

polices
15/04/2025

ಮೂಡಿಗೆರೆ: ತಾಲೂಕು ಬಣಕಲ್ ಹೋಬಳಿಯ ಕೊಟ್ಟಿಗೆಹಾರ್ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 12.04.2025 ರಂದು ಸಂಜೆ 6 ಗಂಟೆಯ ಸುಮಾರಿಗೆ ಅಜಾದ್ ನಗರದಲ್ಲಿ ಈ ದುಷ್ಕೃತ್ಯ ನಡೆದಿದೆ. ಈ ಬಗ್ಗೆ ಪೀಡಿತ ಮಹಿಳೆ ಸುರೇಖಾ (38), ಆದಿಕರ್ನಾಟಕ ಸಮುದಾಯದವರು, ದಿನಾಂಕ 13.04.2025 ರಂದು ರಾತ್ರಿ 11 ಗಂಟೆಗೆ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿ ದೂರು ನೀಡಿದ್ದರು.

ದೂರಿನ ವಿವರಗಳ ಪ್ರಕಾರ, ಆಕೆಯು ಮನೆಯಲ್ಲಿ ಒಬ್ಬಳೇ ಇದ್ದಾಗ, ರಾಮನಗರದ ಅಬ್ಬಾಸ್ ಎಂಬ ವ್ಯಕ್ತಿ ಮನೆಗೆ ಬಂದು ವಾಹನದ ಬಾಡಿಗೆ ಬಾಕಿ ಹಣ 700 ರೂ. ತಕ್ಷಣ ನೀಡುವಂತೆ ಒತ್ತಾಯಿಸಿದ್ದ. ಹಣ ಇಲ್ಲವೆಂದಾಗ, “ಹಣ ಬೇಡ, ನನ್ನ ಜೊತೆ ಮಲಗಿಕೋ” ಎಂದು ಹೇಳಿ ಆಕೆಯ ಬಲಗೈ ಹಿಡಿದು ಎಳೆಯುವ ಪ್ರಯತ್ನ ನಡೆಸಿದ್ದ. ಮಹಿಳೆ ತಪ್ಪಿಸಿಕೊಂಡು ಓಡಿದಾಗ ಆಕೆಯ ಕೂದಲನ್ನು ಹಿಡಿದು ಹೊಟ್ಟೆ ಹಾಗೂ ಸೊಂಟಕ್ಕೆ ಲಾತಿಯಿಂದ ಬಡಿದು ತಳ್ಳಿ ಕೆಳಗೆ ಬೀಳಿಸಿದ್ದಾನೆ. ನಂತರ ಮಹಿಳೆ ತನ್ನ ಮಗಳನ್ನು ಕರೆಸಿದಾಗ, ಮನೆಗೆ ಬಂದ ಮಗಳನ್ನು ಕೂಡ ದೈಹಿಕವಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಐಪಿಸಿ ಕಲಂಗಳು 329(4), 74, 75, 115(2), 352, 351(2)(3) ಹಾಗೂ ಎಸ್ಸಿ/ಎಸ್ಟಿ (ಅತ್ಯಾಚಾರ ನಿರೋಧಕ) ಕಾಯ್ದೆಯ 3(1)(w), 3(2)(va) ರ ಅಂಗವಾಗಿ ಬಣಕಲ್ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 0026/2025ರಂತೆ ಪ್ರಕರಣ ದಾಖಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version