7:51 AM Saturday 25 - October 2025

ನ್ಯಾಯಕ್ಕಾಗಿ 4 ವರ್ಷದ ಮಗುವಿನೊಂದಿಗೆ  ರಾತ್ರಿ 1 ಗಂಟೆವರೆಗೆ ಪೊಲೀಸ್ ಠಾಣೆಯಲ್ಲಿ ಕೂತ ಮಹಿಳೆ!

chikkamagaluru
02/06/2023

ಚಿಕ್ಕಮಗಳೂರು:  ಮಹಿಳೆಯೊಬ್ಬರು ನ್ಯಾಯಕ್ಕಾಗಿ ತನ್ನ 4 ವರ್ಷದ ಮಗು ಜೊತೆ ರಾತ್ರಿ 1 ಗಂಟೆವರೆಗೂ ಠಾಣೆಯಲ್ಲಿ ಕೂತ ಘಟನೆ ಕುದುರೆಮುಖ ಪೊಲೀಸ್ ಠಾಣೆಯ ಸಂಸೆ ಗ್ರಾಮದಲ್ಲಿ ನಡೆದಿದ್ದು,  ಮಗುವಿಗೆ ಪೊಲೀಸ್ ಠಾಣೆಯಲ್ಲೇ ಊಟ ಮಾಡಿಸಿ ತಾಯಿ ಮಲಗಿಸಿದ್ದಾರೆ.

ಯುವಕರ ಅಸಭ್ಯ ವರ್ತನೆ ಹಾಗೂ ಗಂಡನಿಗೆ ಜೀವ ಬೆದರಿಕೆ ಇದೆ ಎಂದು ಮಹಿಳೆ ದೂರು ನೀಡಿದ್ದು,  ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲಾಗದೆ ಮನೆಗೆ ಹೋಗಲ್ಲ ಎಂದು ಪಟ್ಟು ಹಿಡಿದ ಮಹಿಳೆ ಪೊಲೀಸ್ ಠಾಣೆಯಲ್ಲಿ ಉಳಿದುಕೊಂಡಿದ್ದಾರೆ.

ಪಕ್ಕದ ಮನೆ ಯುವಕರಿಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮಾಡಿದ್ದು, ಈ ಬಗ್ಗೆ ಅಸಭ್ಯ ವರ್ತನೆಯ ವಿಡಿಯೋ ನೀಡಿ ಎರಡು ದಿನಗಳ ಹಿಂದೆ ದೂರು ನೀಡಿದರೂ  ಕುದುರೆಮುಖ ಪೊಲೀಸರು ದೂರು ದಾಖಲಿಸಿಲ್ಲ ಎನ್ನಲಾಗಿದೆ. ಹೀಗಾಗಿ  ಮಹಿಳೆ ಕಳಸ‌  ಇನ್ಸ್‌ ಪೆಕ್ಟರ್ ಕಚೇರಿಯಲ್ಲಿ ಮಧ್ಯರಾತ್ರಿವರೆಗೂ ಕುಳಿತಿದ್ದಾರೆ.

ಮಹಿಳೆಯ ಆಕ್ರೋಶ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯರಾತ್ರಿ ಯುವಕರ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಅಸಭ್ಯ ವರ್ತನೆ ಮಾಡಿದ ನವೀನ್, ಶ್ರೇಯಾಂಶ್ ಎಂಬ ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಮಹಿಳೆ ಹಾಗೂ ಮಹಿಳೆಯ ಪತಿ ರಾಜೇಂದ್ರ ಮನೆಯಲ್ಲಿದ್ದ ವೇಳೆ ಆರೋಪಿಗಳಾದ ನವೀನ್, ಶ್ರೇಯಾಂಶ್ ಎಂಬವರು ಮನೆಯ ಕಿಟಕಿಯ ಬಳಿ ಬಂದು ರಾಜೇಂದ್ರಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಈ ವೇಳೆ ಸಂತ್ರಸ್ತ ಮಹಿಳೆ ಕಿಟಕಿ ಬಾಗಿಲು ಹಾಕಲು ಯತ್ನಿಸಿದಾಗ ಕಿಡಿಗೇಡಿಗಳು ಕಿಟಕಿ ಬಾಗಿಲನ್ನು ಹಿಡಿದುಕೊಂಡು ಪ್ಯಾಂಟ್ ಬಿಚ್ಚಿ ತೋರಿಸಿದ್ದಲ್ಲದೇ ಅಸಭ್ಯ ಸನ್ನೆ ಮಾಡಿ, ಅಶ್ಲೀಲ ಪದಗಳಿಂದ ಬೈದಿರುವುದಾಗಿ ಮಹಿಳೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version