5:14 PM Thursday 27 - November 2025

ಯುವಕನನ್ನು ಅಟ್ಟಾಡಿಸಿ ಭೀಕರ ಕೊಲೆ: ಇಬ್ಬರು ಸ್ನೇಹಿತರಿಂದಲೇ ಕೃತ್ಯ

mysore crime news
27/11/2025

ಮೈಸೂರು: ಮೈಸೂರಿನ ಶಾಂತಿನಗರದ ಮಹಾಮದೀಯ ಮಸೀದಿ ಬಳಿಯ ಚೌಂಕಂಡಿ ಬಳಿ ಭೀಕರ ಕೊಲೆ ನಡೆದಿದೆ.

ಶಾಂತಿ ನಗರದ ನಿವಾಸಿ ಸೈಯದ್ ಸೂಫಿಯನ ಕೊಲೆಯಾದ ಯುವಕನಾಗಿದ್ದು, ತಡ ರಾತ್ರಿಯವರೆಗೂ ಆತನ ಜೊತೆಗಿದ್ದ ಸ್ನೇಹಿತರೇ ಕೃತ್ಯ ಎಸಗಿದ್ದಾರೆ.

ಮೊಹಮ್ಮದ್ ಸಾಕಿಬ್, ರಾಹಿಲ್  ಎಂಬ ಯುವಕರರು ಸೂಫಿಯನನನ್ನ ಶಾಂತಿ ನಗರದಲ್ಲಿ ಅಟ್ಟಾಡಿಸಿಕೊಂಡು ಬರ್ಬರವಾಗಿ ಹತ್ಯೆ ನಡೆಸಿದ್ದಾರೆ. ಹತ್ಯೆಯ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಸೈಯದ್ ಸೂಫಿಯನ ಬೆಳಗ್ಗೆ ನಮಾಝ್ ಗೆ ಬಂದಿದ್ದ ವೇಳೆ ಸ್ನೇಹಿತರೇ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ವರದಿಗಳ ಪ್ರಕಾರ, ಮೊಹಮ್ಮದ್ ಸಾಕಿಬ್ ಅಣ್ಣನ ಮೇಲೆ ಸೋಫಿಯಾನ ಹಲವು ದಿನಗಳ ಹಿಂದೆ ಹಲ್ಲೆ ಮಾಡಿದ್ದನಂತೆ. ಈ ವಿಚಾರದಲ್ಲಿ ಮೊಹಮದ್ ಸಾಕಿಬ್, ಸೋಫಿಯಾನ ನಡುವೆ ವೈಮನಸ್ಸು ಉಂಟಾಗಿತ್ತಂತೆ. ತಡರಾತ್ರಿಯೂ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಸದ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪೊಲೀಸರ ತನಿಖೆಯ ನಂತರ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version