12:22 PM Wednesday 10 - December 2025

ಕಾಟೇರ ಸಿನಿಮಾ ಟೆಲಿಗ್ರಾಂಗೆ ಅಪ್ ಲೋಡ್ ಮಾಡಿದ ಯುವಕ ಅರೆಸ್ಟ್!

kaatera
05/01/2024

ರಾಯಚೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವೃತ್ತಿ ಜೀವನದ ಅತ್ಯುತ್ತಮ ಚಿತ್ರ ಎಂದೇ ಹೆಸರಾಗಿರುವ ಕಾಟೇರ ಚಿತ್ರ ಭರ್ಜರಿ ಯಶಸ್ಸನ್ನು ಗಳಿಸಿದೆ. ಇದೇ ವೇಳೆ ಚಿತ್ರ ತಂಡಕ್ಕೆ ಪೈರಸಿ ಕಾಟ ಶುರುವಾಗಿದೆ.

ಕಾಟೇರ ಚಿತ್ರವನ್ನು ಯುವಕನೋರ್ವ ಟೆಲಿಗ್ರಾಂನಲ್ಲಿ ಅಪ್ ಲೋಡ್ ಮಾಡಿ, 40 ರೂಪಾಯಿಗೆ ಚಿತ್ರವನ್ನು ಮಾರಾಟ ಮಾಡುತ್ತಿದ್ದ, ಸದ್ಯ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಿಂಗ್ ಪಿನ್ ತಲೆಮರೆಸಿಕೊಂಡಿದ್ದಾನೆ.

ಕಾಟೇರ ಚಿತ್ರ ತಂಡಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಸಂಬಂಧ ದೂರು ನೀಡಲಾಗಿದ್ದು, ಕಾಪಿ ರೈಟ್ ಆ್ಯಕ್ಟ್ 420 ಐಪಿಸಿ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ಪೈರಸಿ ಮಾಡುವವರಿಗೆ ನಟ ದರ್ಶನ್ ಅವರು ಎಚ್ಚರಿಕೆ ನೀಡಿದ್ದರು. ಇಂದು ನಿನ್ನೆ ಬಿಡುಗಡೆಯಾದ ಸಿನಿಮಾಗಳು ಮರುದಿನ ಟೆಲಿಗ್ರಾಂನಲ್ಲಿ ಸಿಗುತ್ತಿವೆ. ಇದು ಚಿತ್ರ ನಿರ್ಮಾಪಕರಿಗೆ ಸಂಕಷ್ಟವನ್ನು ತಂದಿಡುತ್ತಿದೆ. ಕೋಟಿಗಟ್ಟಲೆ ಹಣ ಸುರಿದು ಚಿತ್ರ ಮಾಡಿದರೂ ಲಾಭವಿಲ್ಲದೇ ಸೊರಗುವಂತೆ ಮಾಡಿದೆ.

ಇತ್ತೀಚಿನ ಸುದ್ದಿ

Exit mobile version