ಅಂಬಾನಿ ಪುತ್ರನ ಮದ್ವೆಯ ಪಾಸಿಟಿವ್ ಪ್ರಚಾರಕ್ಕೆ ಯೂಟ್ಯೂಬರ್ ಗಳಿಗೂ ಆಫರ್: ‘ನಾನು ಮಾಡಲ್ಲ’ ಎಂದ ಮಹಿಳಾ ಕಂಟೆಂಟ್ ಕ್ರಿಯೇಟರ್

19/07/2024

ತನ್ನದೇ ಮಾಲೀಕತ್ವದಲ್ಲಿ 9 ಚಾನೆಲ್ ಗಳನ್ನು ಹೊಂದಿರುವ ಉದ್ಯಮಿ ಮುಕೇಶ್ ಅಂಬಾನಿ ತನ್ನ ಪುತ್ರ ಅನಂತ್ ಅಂಬಾನಿಯ ಮದುವೆಯ ಕುರಿತು ಪಾಸಿಟಿವ್ ಪ್ರಚಾರ ನಡೆಸಲು ಯುಟ್ಯೂಬರ್‌ ಗಳನ್ನು ಆಶ್ರಯಿಸದ್ದ ವಿಷಯ ಈಗ ಬಹಿರಂಗಗೊಂಡಿದೆ. ನನಗೆ ₹3.6 ಲಕ್ಷದ ಆಫರ್ ನೀಡಲಾಗಿತ್ತು. ಆದರೆ, ನಾನು ಅದನ್ನು ತಿರಸ್ಕರಿಸಿದೆ ಎಂದು ಖ್ಯಾತ ಕಂಟೆಂಟ್ ಕ್ರಿಯೇಟರ್ ಕಾವ್ಯ ತಿಳಿಸಿದ್ದಾರೆ.

“ಅನಂತ್ ಅಂಬಾನಿಯ ಅದ್ದೂರಿ ಮದುವೆ ಭಾರತದ ಆರ್ಥಿಕತೆಯ ಮೇಲೆ ಹೇಗೆ ಧನಾತ್ಮಕ ಪರಿಣಾಮ ಬೀರುತ್ತದೆ ಅಥವಾ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಪ್ರಚಾರ ಪಡಿಸುವುದು ನನ್ನ ಕೆಲಸವಾಗಿತ್ತು.

ಅಂಬಾನಿ ಕುಟುಂಬ ಕೊಟ್ಟ ಆಫರ್ ನನ್ನ ಸಾಮಾನ್ಯ ದರ ಮೂರು ಲಕ್ಷಕ್ಕಿಂತ ಕೊಂಚ ಹೆಚ್ಚೇ ಇತ್ತು. ನನ್ನ ಪೋಷಕರು ಕೂಡ ಒಪ್ಪಂದ ಸ್ವೀಕರಿಸುವಂತೆ ಒತ್ತಾಯಿಸಿದ್ದರು. ಆದರೂ ನಾನು ತಿರಸ್ಕರಿಸಿದೆ” ಎಂದಿರುವ ಕಾವ್ಯ, ಅದಕ್ಕೆ ನಾಲ್ಕು ಕಾರಣಗಳನ್ನು ವಿವರಿಸಿದ್ದಾರೆ.

ದೊಡ್ಡ ಮೊತ್ತದ ಒಪ್ಪಂದ ತಿರಸ್ಕರಿಸುವುದು ಸವಾಲಿನ ಸಂಗತಿಯಾಗಿದೆ ಎಂದು ಲಿಂಕ್ಡ್‌ ಇನ್‌ನಲ್ಲಿ ಕಾವ್ಯ ಹಾಕಿರುವ ಪೋಸ್ಟ್‌ಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ನಿರ್ಧಾರ ಎಂದಿದ್ದಾರೆ. ಕಾವ್ಯ ಅವರ ಪೋಸ್ಟ್‌ನಿಂದ ಅಂಬಾನಿ ಕುಟುಂಬ ಮದುವೆಯ ಬಗ್ಗೆ ಧನಾತ್ಮಕ ಪ್ರಚಾರ ಮಾಡಲೂ ಕೂಡ ಹಣ ಪಾವತಿಸಿದೆ ಎಂಬ ವಿಷಯವೊಂದು ಬಯಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version