3:38 PM Wednesday 15 - October 2025

ಯುವ ಕಾಂಗ್ರೆಸ್ ನಾಯಕಿಗೆ ಚೂರಿ ಇರಿತ

reena
22/01/2022

ಕಾಪು: ಯುವ ಕಾಂಗ್ರೆಸ್ ನಾಯಕಿಗೆ ವ್ಯಕ್ತಿಯೋರ್ವ ಚೂರಿಯಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಗಾಯಾಳು ಮಹಿಳೆಯನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿ’ಸೋಜಾ(35) ಚೂರಿ ಇರಿತಕ್ಕೊಳಗಾದ ಮಹಿಳೆಯಾಗಿದ್ದಾರೆ.  ನೆರೆಯಮನೆಯ 36 ವರ್ಷ ವಯಸ್ಸಿನ ವಿನಯ ಎಂಬಾತ ರೀನಾ ಅವರ ಮೇಲೆ ಹಲ್ಲೆ ನಡೆದ ಆರೋಪಿ ಎಂದು ತಿಳಿದು ಬಂದಿದೆ.

ತನ್ನ ಮನೆಯ ಬಳಿ ಓರ್ವರ ಜೊತೆಗೆ ರೀನಾ ಅವರು ಮಾತನಾಡುತ್ತಿದ್ದ ವೇಳೆ ವಿನಯ ಏನಾಏಕಿ ಚೂರಿಯಿಂದ ಹೊಟ್ಟೆ ಚುಚ್ಚಿದ್ದಾನೆ ಎನ್ನಲಾಗಿದೆ. ಆರೋಪಿ ವಿನಯ ಕುಡಿತದ ಚಟ ಹೊಂದಿದ ವ್ಯಕ್ತಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಪಡುಬಿದ್ರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಸಿಬಿ ದಾಳಿ : ಮುಜರಾಯಿ ತಹಶೀಲ್ದಾರ್ ಬಂಧನ

ಮಹಿಳೆಯರ ಏಷ್ಯಾಕಪ್​ ಹಾಕಿ ಟೂರ್ನಿ: ಮಲೇಷ್ಯಾ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಗೆಲುವು

ವಿದ್ಯುತ್ ದರ ಹೆಚ್ಚಳ ಮಾಡುವುದು ಅನಿವಾರ್ಯ: ಸಚಿವ ವಿ.ಸುನಿಲ್ ಕುಮಾರ್

ಅಪ್ರಾಪ್ತೆ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

ಕೊರಗಜ್ಜನ ವೇಷ ಹಾಕಿ ಅಪಹಾಸ್ಯ; ಮತ್ತೆ ಪ್ರಕರಣ ದಾಖಲು

 

ಇತ್ತೀಚಿನ ಸುದ್ದಿ

Exit mobile version