ಝೀರೊ ಬಿಲ್ ಜೊತೆಗೆ ಝೀರೊ ಕರೆಂಟ್ ಆಗಿದೆ: ಹೋರಾಟ ಮಾಡ್ತೀವಿ: ನಳಿನ್ ಕುಮಾರ್ ಕಟೀಲ್

nalin kumar kateel
31/08/2023

ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ಇದ್ದು, ಬರ ಪರಿಸ್ಥಿತಿ ಎದುರಾಗಿದೆ. ಇದರ ನಡುವೆ ಪಂಪ್ ಸೆಟ್ ಗಳಿಗೆ ಕರೆಂಟ್ ಇಲ್ಲ, ಜನ ತತ್ತರಿಸಿ ಹೋಗಿದ್ದಾರೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಜೊತೆ ಮಾತನಾಡಿದರು.

ಚುನಾವಣೆ ಪೂರ್ವ ಕಾಂಗ್ರೆಸ್ ಘೋಷಣೆ ಮಾಡಿದ್ದ ಗ್ಯಾರಂಟಿಗಳಿಗೆ ಮಾನದಂಡ ಇರಲಿಲ್ಲ. ಈವರೆಗೆ ಘೋಷಿಸಿದ ನಾಲ್ಕು ಗ್ಯಾರಂಟಿಗಳಿಗೆ ಮಾನದಂಡ ಹಾಕಲಾಗಿದೆ‌. ಗೃಹ ಜ್ಯೋತಿ ಹೆಸರಲ್ಲಿ ಇಡೀ ರಾಜ್ಯವನ್ನು ಕತ್ತಲಿನಲ್ಲಿ ಇಡಲಾಗಿದೆ. ಝೀರೊ ಬಿಲ್ ಜೊತೆಗೆ ಈಗ ಝೀರೊ ಕರೆಂಟ್ ಆಗಿದೆ ಎಂದು ಟೀಕಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುವುದರಿಂದ ರಾಜ್ಯದ ರೈತರಿಗೆ ಸಮಸ್ಯೆ ಆಗಲಿದೆ. ರಾಜ್ಯದ ರೈತರ ಇಚ್ಛೆ ಪೂರೈಸದೆ, ಅವರಿಗೆ ನ್ಯಾಯ ಕೊಡದೆ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಇತ್ತೀಚಿನ ಸುದ್ದಿ

Exit mobile version