10:07 AM Tuesday 9 - December 2025

ಭಾರತೀಯ ಮೂಲದ ಅಮೆರಿಕನ್ನರಿಗೆ ಪೌರತ್ವ ನೀಡುತ್ತೇನೆ ಎಂದ ಜೋ ಬೈಡನ್

15/10/2020

ವಾಷಿಂಗ್ಟನ್: ತಾನು ಅಧಿಕಾರಕ್ಕೆ ಬಂದರೆ, 11 ಮಿಲಿಯನ್ ಮಂದಿಯ ಅಕ್ರಮ ವಲಸೆ, ಪೌರತ್ವ ಸಮಸ್ಯೆ ದೂರಾಗಿಸಿ ಎಲ್ಲರಿಗೂ ಅಮೆರಿಕ ಪೌರತ್ವ ನೀಡುವ ಭರವಸೆಯನ್ನು ಜೋ ಬೈಡನ್ ನೀಡಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೊ ಬೈಡನ್ ತಮ್ಮ ಇತ್ತೀಚಿನ ಭಾಷಣದಲ್ಲಿ ಕೊರೊನಾ ವೈರಸ್‌ ವಿರುದ್ಧದ ಹೋರಾಟ ಹಾಗೂ ವಲಸಿಗರಿಗೆ ಪೌರತ್ವ ನೀಡುವುದರ ಬಗ್ಗೆ ಮಾತನಾಡಿದರು.

ಭಾರತ ಮೂಲದ ಅಮೆರಿಕನ್ನರು ಈ ದೇಶದ ಅಭಿವೃದ್ಧಿಗೆ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಪ್ರತಿ ಭಾಷಣದಲ್ಲೂ ಹೇಳುತ್ತಾ ಬಂದಿರುವ ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಜೋ ಬೈಡನ್ ಅವರು ಮತ್ತೆ ಭಾರಿ ಆಶ್ವಾಸನೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version