9:18 AM Saturday 25 - October 2025

ಗಾಝಾದಲ್ಲಿ ಒತ್ತೆಯಾಳಾಗಿದ್ದ 10 ತಿಂಗಳ ಮಗು ಇಸ್ರೇಲಿ ದಾಳಿಯಲ್ಲಿ ಹತ್ಯೆ: ಹಮಾಸ್ ವರದಿ

29/11/2023

ಗಾಝಾದಲ್ಲಿ ಹಮಾಸ್ ವಶದಲ್ಲಿದ್ದ ಅತ್ಯಂತ ಕಿರಿಯ ಒತ್ತೆಯಾಳಾಗಿದ್ದ 10 ತಿಂಗಳ ಮಗು ಕೆಫಿರ್ ಬಿಬಾಸ್ ಈ ಹಿಂದೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದೆ ಎಂದು ಬಂಡುಕೋರರ ಗುಂಪು ಹೇಳಿಕೊಂಡಿದೆ. ಅವರ 4 ವರ್ಷದ ಸಹೋದರ ಏರಿಯಲ್ ಬಿಬಾಸ್ ಮತ್ತು ಅವರ ತಾಯಿ ಶಿರಿ ಬಿಬಾಸ್ ಕೂಡ ಇಸ್ರೇಲಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ನ ಸಶಸ್ತ್ರ ವಿಭಾಗ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಹಮಾಸ್ ನ ಹೇಳಿಕೆಯನ್ನು ಪರಿಶೀಲಿಸುತ್ತಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. “ಗಾಝಾ ಪಟ್ಟಿಯಲ್ಲಿರುವ ಎಲ್ಲಾ ಒತ್ತೆಯಾಳುಗಳ ಭದ್ರತೆಗೆ ಹಮಾಸ್ ಸಂಪೂರ್ಣ ಜವಾಬ್ದಾರಿಯಾಗಿದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಮಂಗಳವಾರ, ಇಸ್ರೇಲ್‌ನ ಮುಖ್ಯ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಕೆಫಿರ್, ಏರಿಯಲ್ ಮತ್ತು ಅವರ ಪೋಷಕರನ್ನು ಹಮಾಸ್ ಮತ್ತೊಂದು ಫೆಲೆಸ್ತೀನ್ ಬಂಡುಕೋರರ ಗುಂಪಿಗೆ ಹಸ್ತಾಂತರಿಸಿದೆ ಎಂದು ಹೇಳಿದ್ದರು. ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್ ಪ್ರದೇಶದಲ್ಲಿ ಈ ಕುಟುಂಬವಿದೆ ಎಂದು ಮತ್ತೊಬ್ಬ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅವಿಚೈ ಅಡ್ರೈ ಹೇಳಿದ್ದಾರೆ.

ಫಿರ್ ಬೀಬಾಸ್ ಅವರ ಕುಟುಂಬದ ಸದಸ್ಯರು ಇಸ್ರೇಲಿ ಸರ್ಕಾರ ಮತ್ತು ಈಜಿಪ್ಟ್ ಮತ್ತು ಕತಾರ್ ನಿಂದ ಇಸ್ರೇಲ್-ಹಮಾಸ್ ಕದನ ವಿರಾಮದ ಮಧ್ಯವರ್ತಿಗಳಿಗೆ ಅವರನ್ನು, ಅವರ ಪೋಷಕರು ಮತ್ತು ಸಹೋದರನನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ಮನವಿ ಮಾಡಿದ ನಂತರ ಇಸ್ರೇಲ್ ಈ ಹೇಳಿಕೆ ನೀಡಿದೆ.

ಇತ್ತೀಚಿನ ಸುದ್ದಿ

Exit mobile version