12:39 AM Saturday 23 - August 2025

135 ಮಕ್ಕಳಿಗೆ ಹರಡಿದ ಕೊರೊನಾ ಸೋಂಕು | ಪೋಷಕರಿಗೆ ಆತಂಕ!

covid
02/05/2021

ತುಮಕೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ನಡುವೆ ತುಮಕೂರು ಜಿಲ್ಲೆಯಲ್ಲಿ ಆತಂಕಕಾರಿ ಘಟನೆಯೊಂದು ವರದಿಯಾಗಿದ್ದು, ಅತೀ ಹೆಚ್ಚು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಕೊವಿಡ್ ಎರಡನೇ ಅಲೆ ಯುವಕರಲ್ಲಿಯೂ ನಡುಕ ಸೃಷ್ಟಿಸಿದೆ. ಈ ನಡುವೆ ತುಮಕೂರಿನಲ್ಲಿ  ಕಳೆದ 10 ದಿನಗಳಲ್ಲಿ 135 ಮಕ್ಕಳಿಗೆ ಕೊರೊನಾ ಸೋಂಕು ತಗಲಿದೆ.  ಏ.22ರಂದು 19 ಮಕ್ಕಳಿಗೆ ಸೋಂಕು ತಗಲಿದ್ದು, ಏ.23ರಂದು 17, ಏ. 24ರಂದು 24, ಏ.25ರಂದು 16, ಏ.30ರಂದು 18 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಕೊರೊನಾ ಮೊದಲ ಅಲೆಯುವ ವಯೋ ವೃದ್ಧರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿ ಪಡೆದಿತ್ತು. ಆದರೆ ಎರಡನೇ ಅಲೆ ಮಧ್ಯ ವಯಸ್ಕರು, ಯುವಕರನ್ನು ಬಲಿ ಪಡೆದಿತ್ತು. ಈ ನಡುವೆ ತುಮಕೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚಿನ ಸುದ್ದಿ

Exit mobile version