3:39 AM Saturday 18 - October 2025

ನ್ಯೂ ಓರ್ಲಿಯನ್ಸ್ ದಾಳಿ ಪ್ರಕರಣ: 15 ಮಂದಿ ಸಾವು

02/01/2025

ನ್ಯೂ ಓರ್ಲಿಯನ್ಸ್ ಗುಂಡಿನ ದಾಳಿಯನ್ನು ನಡೆಸಿದ ಶಂಕಿತ ಆರೋಪಿಯನ್ನು ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ ಯುಎಸ್ ಸೇನಾ ಅನುಭವಿ ಎಂದು ಗುರುತಿಸಲಾಗಿದ್ವ್. ತನ್ನ ಟ್ರಕ್‌ನಲ್ಲಿ ಈತ ಐಸಿಸ್ ಧ್ವಜವನ್ನು ಹೊಂದಿದ್ದನು ಮತ್ತು ಇತರರ ಸಹಾಯದಿಂದ ಹತ್ಯಾಕಾಂಡವನ್ನು ನಡೆಸಿರಬಹುದು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ತಿಳಿಸಿದೆ. ಹೊಸ ವರ್ಷದ ದಿನದಂದು ಜನನಿಬಿಡ ಫ್ರೆಂಚ್ ಕ್ವಾರ್ಟರ್ಸ್ ನಲ್ಲಿ ಸಂಭವಿಸಿದ ಈ ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಎಫ್ಬಿಐ ಇದನ್ನು ಭಯೋತ್ಪಾದಕ ದಾಳಿ ಎಂದು ತನಿಖೆ ನಡೆಸುತ್ತಿದೆ.

ದಾಳಿಕೋರ ಶಂಸುದ್ದೀನ್ ಜಬ್ಬಾರ್ ಮೊದಲು ಜನಸಮೂಹವನ್ನು ಟಾರ್ಗೆಟ್ ಮಾಡಿದ್ದಾನೆ ಮತ್ತು ನಂತರ ಬುಧವಾರ ಜನಸಮೂಹದ ಮೇಲೆ ಗುಂಡು ಹಾರಿಸಿದ್ದಾನೆ. 15 ಜನರನ್ನು ಕೊಂದ ನಂತರ ಕನಿಷ್ಠ 30 ಜನರನ್ನು ಗಾಯಗೊಳಿಸಿದನು. ಘಟನೆಯ ನಂತರ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಅವನು ಸಾವನ್ನಪ್ಪಿದ್ದಾನೆ.

ತನಿಖಾಧಿಕಾರಿಗಳು ವಾಹನದಲ್ಲಿ ಬಂದೂಕುಗಳು ಮತ್ತು ಸುಧಾರಿತ ಸ್ಫೋಟಕ ಸಾಧನ ಮತ್ತು ಇತರ ಸಾಧನಗಳನ್ನು ಪತ್ತೆ ಮಾಡಿದ್ದಾರೆ. ವಾಹನದ ಟ್ರೈಲರ್ ಮೇಲೆ ಐಸಿಸ್ ಧ್ವಜ ಪತ್ತೆಯಾಗಿದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version