ಇದರಲ್ಲಿ ಯಾವುದು ಅಮಾನವೀಯತೆ?: ಸಾಮಾಜಿಕ ಜಾಲತಾಣಗಳಲ್ಲಿ 2 ಫೋಟೋ ವೈರಲ್

what is inhuman
21/11/2023

ಆಸ್ಟ್ರೇಲಿಯಾ ಆಟಗಾರ ಮಿಚೆಲ್‌ ಮಾರ್ಷ್‌ ವಿಶ್ವಕಪ್‌ ಟ್ರೋಫಿ ಮೇಲೆ ಕಾಲಿಟ್ಟು ಸಂಭ್ರಮಿಸುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಚಿತ್ರದ ವಿರುದ್ಧ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಮತ್ತೊಂದು ಚಿತ್ರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಸ್ವಾಮೀಜಿಯೊಬ್ಬ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಾಲಿಟ್ಟಿರುವ ದೃಶ್ಯ ಈ ಚಿತ್ರದಲ್ಲಿದೆ. ಮಿಚೆಲ್‌ ಮಾರ್ಷ್‌ ವಿಶ್ವಕಪ್‌ ಮೇಲೆ ಕಾಲಿಟ್ಟಿರುವುದು ಮತ್ತು ಸ್ವಾಮೀಜಿಯೊಬ್ಬರ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಾಲಿಟ್ಟಿರುವುದರಲ್ಲಿ ಅಮಾನುಷವಾದದ್ದು ಯಾವುದು? ಎನ್ನುವ ಪ್ರಶ್ನೆಗಳನ್ನು ಪ್ರಜ್ಞಾವಂತ ಜನಸಮೂಹ ಕೇಳಿದೆ.

ವಿಶ್ವಕಪ್‌ ಮೇಲೆ ಕಾಲಿಟ್ಟು ಅವಮಾನ ಮಾಡಲಾಗಿದೆ ಎಂದು ವಾದಿಸುವ ಜನರು ಒಬ್ಬ ಮನುಷ್ಯನ ಪಾದಕ್ಕೆ ನಮಸ್ಕರಿಸುವುದು ಅವಮಾನ ಎಂದು ಯಾಕೆ ಅಂದುಕೊಳ್ಳುವುದಿಲ್ಲ? ಒಬ್ಬ ಸ್ವಾಮೀಜಿ ಜನಸಾಮಾನ್ಯನೊಬ್ಬನ ತಲೆಯ ಮೇಲೆ ಕಾಲಿಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version