ದುಡ್ಡು ಮಾಡೋಕೇ ಸುಳ್ಳು ಅತ್ಯಾಚಾರ ಕೇಸ್ ಕೊಡುತ್ತಿದ್ರು: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಲೇಡಿ

29/08/2023

ಇವರು ಅಂತಿಂತಹ ಹೆಣ್ಮಕ್ಕಳಲ್ಲ. ದುಡ್ಡು ಮಾಡೋಕೇ ಅವರು ಖತರ್ನಾಕ್ ಐಡಿಯಾಗಳನ್ನು ಸೃಷ್ಟಿ ಮಾಡುತ್ತಿದ್ದರು. ಕೊನೆಗೂ ಅವರ ಕಪಟ ನಾಟಕ ಬಯಲಾಗಿದೆ.

ಹೌದು. ಹಣ ಸುಲಿಗೆ ಮಾಡಲು ಮಾಡಲು ಅಮಾಯಕರ ವಿರುದ್ಧ ಅತ್ಯಾಚಾರದ ಸುಳ್ಳು ದೂರನ್ನು ನೀಡುತ್ತಿದ್ದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಯುವತಿಯರಿಗೆ ಸಹಕಾರ ನೀಡುತ್ತಿದ್ದ ಓರ್ವ ಯುವಕನನ್ನೂ ಪೊಲೀಸರು ಬಂಧಿಸಿದ್ದಾರೆ.

ಬಂಧಿತರೆಲ್ಲರೂ ಗುಜರಾತ್ ಮೂಲದವರಾಗಿದ್ದು, ಇವರು ಗೋವಾ ಹಾಗೂ ಗುಜರಾತಿನ ವಿವಿಧ ಭಾಗದಲ್ಲಿ ಹಲವಾರು ವ್ಯಕ್ತಿಗಳ ವಿರುದ್ಧ ಅತ್ಯಾಚಾರ ದೂರು ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರಕರಣಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಯುವತಿಯರು ಸಂತ್ರಸ್ತರ ಪರಿಚಯ ಮಾಡಿ ಗೆಳೆತನ ಆರಂಭಿಸಿ, ಬಳಿಕ ನಕಲಿ ರೇಪ್‌ ಕೇಸ್‌ಗಳನ್ನು ನೀಡುವುದಾಗಿ ಬೆದರಿಕೆ ಒಡ್ಡುತ್ತಾರೆ. ದೂರು ನೀಡಬಾರದೆಂದರೆ ದುಡ್ಡು ಕೊಡಬೇಕು ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎಂಬ ವಿಚಾರ ಬಯಲಾಗಿದೆ.

ಗುಜರಾತ್ ಮೂಲದ ವ್ಯಕ್ತಿಯೊಬ್ಬರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರು ಯುವತಿಯರು ನನ್ನನ್ನು ಬೆದರಿಸುವ ಉದ್ದೇಶದಿಂದ ನನ್ನೊಂದಿಗೆ ಗೆಳೆತನ ಬೆಳೆಸಿ, ನನ್ನಿಂದ ಹಣ ಸುಲಿಗೆ ಮಾಡಲು ನಕಲಿ ಅತ್ಯಾಚಾರದ ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ ಬಳಿಕ ಈ ಕೇಸ್ ಬೆಳಕಿಗೆ ಬಂದಿದೆ. ಈ ದೂರನ್ನು ದಾಖಲಿಸಿ ಗೋವಾದ ಕಲನ್ ಗ್ಯೂಟ್ ಠಾಣೆಯ ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version