12:20 PM Saturday 24 - January 2026

ಬ್ರೇಕಿಂಗ್ ನ್ಯೂಸ್: ಕೊನೆಯ ಅವಕಾಶವನ್ನೂ ಕಳೆದುಕೊಂಡ ಡೊನಾಲ್ಡ್ ಟ್ರಂಪ್

06/11/2020

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಹಾಗಾಗಿ ಮತ ಎಣಿಕೆ ನಿಲ್ಲಿಸಬೇಕು ಎಂದು  ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಕುಸಿಯುತ್ತಿದ್ದರೆ, ಬೈಡೆನ್ ಬಹುಮತದತ್ತ ಸಾಗಿದ್ದಾರೆ.  ಫಲಿತಾಂಶವನ್ನು ಕಂಡು ಟ್ರಂಪ್ ತೀವ್ರ ಅಸಹಾಯಕತೆ ವ್ಯಕ್ತಪಡಿಸಿದ್ದರು. ವಂಚನೆ ಮಾಡಲಾಗುತ್ತಿದೆ ಎಂದು ಹೇಳಿದರು. ಜೊತೆಗೆ ತಾನು ಗೆದ್ದ ಸಂಭ್ರಮವನ್ನು ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅವುಗಳನ್ನೆಲ್ಲ ನಿಲ್ಲಿಸಬೇಕಾಗಿ ಬಂದಿದೆ ಎಂದು ಹೇಳಿದ್ದರು.

ಡೆಮಾಕ್ರಟಿಕ್ ಪಾರ್ಟಿಯ ಜೋ ಬೈಡೆನ್ ಅವರು ಗೆಲುವಿನತ್ತ ಸಾಗುತ್ತಿದ್ದರೆ, ಇತ್ತ ಟ್ರಂಪ್ ಮತ ಎಣಿಕೆ ನಿಲ್ಲಿಸಬೇಕು ಎಂದು ಮಿಚಿಗನ್ ಕೋರ್ಟ್ ಆಫ್ ಕ್ಲೈಮ್ ಗೆ ಅರ್ಜಿ ಸಲ್ಲಿಸಿದ್ದರು. ಟ್ರಂಪ್ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಅರ್ಜಿಯನ್ನು ವಜಾ ಮಾಡಿದೆ.

ಇತ್ತೀಚಿನ ಸುದ್ದಿ

Exit mobile version