11:05 AM Friday 19 - December 2025

ಹಿಜ್ಬುಲ್ಲಾಗೆ ಸಂಬಂಧಿಸಿದ 220 ಸ್ಥಳಗಳ ಮೇಲೆ ದಾಳಿ: ಇಸ್ರೇಲ್ ಸೇನೆ ಹೇಳಿಕೆ

27/09/2024

ಲೆಬನಾನ್‌ನಲ್ಲಿ ಹಿಜ್ಬುಲ್ಲಾಗೆ ಸಂಬಂಧಿಸಿದ 220 ಸ್ಥಳಗಳ ಮೇಲೆ ವಾಯುಪಡೆ ಕಳೆದ ಒಂದು ದಿನದಲ್ಲಿ ದಾಳಿ ಮಾಡಿದೆ ಎಂದು ಇಸ್ರೇಲ್‌ ಸೇನೆ  ತಿಳಿಸಿದೆ. ಲೆಬನಾನ್‌ನಲ್ಲಿ ಕದನ ವಿರಾಮ ಘೋಷಣೆಗೆ ಅಮೆರಿಕ ಮತ್ತು ಫ್ರಾನ್ಸ್‌ ಇರಿಸಿದ್ದ ಪ್ರಸ್ತಾಪವನ್ನು ಇಸ್ರೇಲ್‌ ತಿರಸ್ಕರಿಸಿದೆ.

ಮೂಲಸೌಕರ್ಯ ನೆಲೆಗಳು, ಇಸ್ರೇಲ್‌ನತ್ತ ಕ್ಷಿಪಣಿಗಳನ್ನು ಉಡಾಯಿಸಲು ಇರಿಸಿದ್ದ ಲಾಂಚರ್‌ಗಳು ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಹೊಂದಿದ್ದ ಶಸ್ತ್ರಾಸ್ತ್ರ ಸಂಗ್ರಹಾಗಾರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

ನಾನ್ ಮೇಲೆ ಈ ವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 600 ಮಂದಿ ಹತರಾಗಿ, ಸಾವಿರಾರು ಮಂದಿ ನೆಲೆ ಕಳೆದುಕೊಂಡ ಹಿನ್ನೆಲೆಯಲ್ಲಿ ಅಮೆರಿಕ, ಯುರೋಪಿಯನ್ ಯೂನಿಯನ್ ಹಾಗೂ ಹಲವು ಅರಬ್ ದೇಶಗಳು ಲೆಬನಾನ್‍ನಲ್ಲಿ 21 ದಿನದ ಯುದ್ಧವಿರಾಮಕ್ಕೆ ಕರೆ ನೀಡಿವೆ. ಪ್ರಸ್ತಾಪವನ್ನು ಕಡೆಗಣಿಸಿರುವ ಪ್ರಧಾನಿ ನೆತನ್ಯಾಹು ಲೆಬನಾನ್‍ನಲ್ಲಿ ಹಿಜ್ಬುಲ್ಲಾ ವಿರುದ್ಧದ ಹೋರಾಟ ಮುಂದುವರಿಸುವಂತೆ ತನ್ನ ಸೇನೆಗೆ ಸೂಚಿಸಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿರುವುದರಿಂದ ತಕ್ಷಣವೇ ಲೆಬನಾನ್‌ ತೊರೆಯುವಂತೆ ಅಲ್ಲಿ ನೆಲೆಸಿರುವ ತನ್ನ ನಾಗರಿಕರಿಗೆ ಭಾರತ, ಆಸ್ಟ್ರೇಲಿಯಾ ಕರೆ ನೀಡಿವೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version