12:06 PM Thursday 21 - August 2025

ನಾವು ಈ ಮಣ್ಣನ್ನು ಬಿಟ್ಟು ಹೋಗಲ್ಲ: ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಉವಾಚ

27/09/2024

ನಾವು ಈ ಮಣ್ಣನ್ನು ಬಿಟ್ಟು ಹೋಗಲ್ಲ ಎಂದು ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅವರು ಈ ಮಾತನ್ನು ಮೂರು ಬಾರಿ ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್ ಅತ್ಯಂತ ನಿಕೃಷ್ಟ ಕ್ರೂರ ಧಾಳಿಯನ್ನು ಫೆಲೆಸ್ತೀನಿಯರ ಮೇಲೆ ಎಸಗಿದೆ ಮತ್ತು ಎಸಗುತ್ತಿದೆ ಎಂದು ಕೂಡ ಅವರು ಹೇಳಿದ್ದಾರೆ.

ಫೆಲೆಸ್ತೀನ್ ನಮ್ಮ ಮಾತೃಭೂಮಿಯಾಗಿದೆ. ನಮ್ಮ ಹೆತ್ತವರು ಮತ್ತು ಮುತ್ತಜ್ಜರ ನಾಡಾಗಿದೆ. ಅದು ಎಂದೂ ನಮ್ಮದಾಗಿಯೇ ಮುಂದುವರಿಯಲಿದೆ. ಈ ಮಣ್ಣನ್ನು ಬಿಟ್ಟು ಯಾರಾದರೂ ಹೋಗುವುದಾದರೆ ಅದು ಅತಿಕ್ರಮಣಕಾರಿಗಳಾದ ಕೊಲೆಗಾರರು ಮಾತ್ರ ಎಂದವರು ಇಸ್ರೇಲ್ ಹೆಸರನ್ನು ಹೇಳದೆಯೇ ಹೇಳಿದ್ದಾರೆ.

ಫೆಲೆಸ್ತೀನ್ ನಲ್ಲಿ ಇಸ್ರೇಲ್ ಜನಾಂಗ ಹತ್ಯೆ ನಡೆಸುತ್ತಿದೆ. ಫೆಲೆಸ್ತೀನಿಯರ ಮೇಲೆ ಈಗ ಏನು ನಡೆಯುತ್ತಿದೆಯೋ ಅದಕ್ಕೆ ಈ ಜಗತ್ತು ಉತ್ತರವಾದಿಯಾಗಿದೆ ಎಂದವರು ಹೇಳಿದ್ದಾರೆ. ಕೇವಲ ಗಾಝಾದಲ್ಲಿ ಮಾತ್ರ 40,000 ಮಂದಿಯನ್ನು ಇಸ್ರೇಲ್ ಸಾಯಿಸಿದೆ. ಒಂದು ಲಕ್ಷಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದು ಎಲ್ಲಾ ಯುದ್ಧ ನಿಯಮಕ್ಕೂ ವಿರುದ್ಧ ಎಂದವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version