10:09 AM Saturday 23 - August 2025

ದುರಂತ: ಗುಜರಾತ್ ನಲ್ಲಿ ಗರ್ಬಾ ಅಭ್ಯಾಸದ ವೇಳೆ ಹೃದಯಾಘಾತದಿಂದ 26 ವರ್ಷದ ಯುವಕ ಸಾವು

05/10/2023

ಗುಜರಾತ್ ನ ಸೂರತ್ ನ 26 ವರ್ಷದ ಯುವಕನೊಬ್ಬ ತರಗತಿಯಲ್ಲಿ ಗರ್ಬಾ ಅಭ್ಯಾಸ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ರಾಜ್ ಧರ್ಮೇಶ್ ಮೋದಿ ಎಂಬುವವರಿಗೆ ಸಮುದಾಯ ಭವನದಲ್ಲಿ ಗರ್ಬಾ ತರಗತಿಯಲ್ಲಿ ಭಾಗವಹಿಸುತ್ತಿದ್ದಾಗ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತು.

ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಾಜ್ ಧರ್ಮೇಶ್ ಮೋದಿ ಅವರು ಆಸ್ಪತ್ರೆಗೆ ಆಗಮಿಸುವಷ್ಟರಲ್ಲಿ ಮೃತಪಟ್ಟಿದ್ದರು.
26 ವರ್ಷದ ವ್ಯಕ್ತಿ ಟೊಯೋಟಾದಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ವರ್ಷ ಲಂಡನ್ ನಲ್ಲಿ ಉನ್ನತ ಶಿಕ್ಷಣ ಪಡೆಯುವ ಯೋಜನೆ ಹೊಂದಿದ್ದರು ಎಂದು ಮೋದಿ ಅವರ ತಂದೆಯ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ಇದೇ ರೀತಿಯ ಘಟನೆ ಈ ಹಿಂದೆ ನಡೆದಿದ್ದು, ಗುಜರಾತ್‌ನ ಜಾಮ್ನಗರದ 19 ವರ್ಷದ ಯುವಕ ಸೆಪ್ಟೆಂಬರ್ 28 ರಂದು ಗರ್ಬಾ ಅಭ್ಯಾಸದ ಸಮಯದಲ್ಲಿ ಕುಸಿದುಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಗುಜರಾತ್ ನ ಜುನಾಗಢದಲ್ಲಿ 24 ವರ್ಷದ ಯುವಕ ಸೆಪ್ಟೆಂಬರ್ 21 ರಂದು ಗರ್ಬಾ ಅಭ್ಯಾಸ ಮಾಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಇತ್ತೀಚಿನ ಸುದ್ದಿ

Exit mobile version