11:34 PM Saturday 23 - August 2025

ಉಗ್ರರೊಂದಿಗೆ ನಂಟು ಹೊಂದಿದ ಆರೋಪ: ಮೂವರು ಜಮ್ಮು&ಕಾಶ್ಮೀರ ಸರ್ಕಾರಿ ಅಧಿಕಾರಿಗಳ ವಜಾ

17/07/2023

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೆಲಸ ಮಾಡಿದ, ಭಯೋತ್ಪಾದಕರಿಗೆ ಮಾಹಿತಿ ಒದಗಿಸಿದ ಹಾಗೂ ಭಯೋತ್ಪಾದಕ ಸಿದ್ಧಾಂತವನ್ನು ಪ್ರಚಾರ ಮಾಡಿದ, ಭಯೋತ್ಪಾದಕರಿಗೆ ಹಣಕಾಸು ಸಂಗ್ರಹಿಸಿದ ಆರೋಪದ ಮೇಲೆ ಕಾಶ್ಮೀರ ವಿಶ್ವವಿದ್ಯಾಲಯದ ಪಿಆರ್ ಓ ಫಹೀಮ್ ಅಸ್ಲಂ, ಕಂದಾಯ ಇಲಾಖೆ ಅಧಿಕಾರಿ ಮುರಾವತ್ ಹುಸೇನ್ ಮತ್ತು ಪೊಲೀಸ್ ಕಾನ್ಸ್ ಟೇಬಲ್ ಅರ್ಷಿದ್ ಅಹ್ಮದ್ ಎಂಬ ಮೂವರು ಸರ್ಕಾರಿ ಅಧಿಕಾರಿಗಳನ್ನು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತವು ಸೇವೆಯಿಂದ ವಜಾಗೊಳಿಸಿದೆ.
ಈ ಮೂವರು ಸರ್ಕಾರಿ ನೌಕರರು ಪಾಕಿಸ್ತಾನ ಐಎಸ್ಐ ಮತ್ತು ಭಯೋತ್ಪಾದಕ ಸಂಘಟನೆಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತನಿಖೆಯಿಂದ ಸ್ಪಷ್ಟವಾಗಿ ಸಾಬೀತಾದ ನಂತರ ಸರ್ಕಾರವು ಭಾರತದ ಸಂವಿಧಾನದ 311 (2) (ಸಿ) ಅನ್ನು ಬಳಸಿಕೊಂಡು ಈ ಕ್ರಮ ತೆಗೆದುಕೊಂಡಿದೆ. ಈ ಮೂವರ ವಜಾದೊಂದಿಗೆ ಈವರೆಗೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ವಜಾಗೊಂಡವರ ಸಂಖ್ಯೆ ಈಗ 52 ಕ್ಕೆ ತಲುಪಿದೆ.
ಇನ್ನು ಸಕ್ರಿಯ ಭಯೋತ್ಪಾದಕರ ವಿರುದ್ಧದ ಕ್ರಮವೂ ಪೂರ್ಣ ವೇಗದಲ್ಲಿ ನಡೆಯುತ್ತಿದೆ. ಭಾರತೀಯ ಸೇನೆ ಸೋಮವಾರ ಪೂಂಚ್ ನಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿ ಇಬ್ಬರು ಒಳನುಸುಳುಕೋರರನ್ನು ಕೊಂದಿದೆ. ಪೂಂಚ್ ಸೆಕ್ಟರ್ ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ತಡೆಯಲಾಗಿದೆ. ಇಬ್ಬರು ನುಸುಳುಕೋರರನ್ನು ಹತ್ಯೆ ಮಾಡಲಾಗಿದೆ.
ಮತ್ತೊಂದು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಉತ್ತರ ಕಾಶ್ಮೀರದ ಹಂದ್ವಾರಾದ ವೊಧ್ಪುರ ಪ್ರದೇಶದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಹಂದ್ವಾರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಸೇನೆಯು ಮುಂಜಾನೆ ಎನ್ಎಚ್ 701 ಬಳಿಯ ವೊಧ್ಪುರ ರಿಡ್ಸ್ ನಿಂದ ಎರಡು ಐಇಡಿಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version