10:12 PM Wednesday 27 - August 2025

ದರ್ಶನ್ ಹೊಡೆದ 3 ಏಟು ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ?

darshan
06/09/2024

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ನಡುವೆ ನಟ ದರ್ಶನ್ ಅವರ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವಿಗೀಡಾಗಿದ್ದ ಅಂತ ವರದಿಯಾಗಿದೆ.

ಹೌದು..! ವರದಿಗಳ ಪ್ರಕಾರ, ರೇಣುಕಾಸ್ವಾಮಿ ಹತ್ಯೆ ದಿನ ಪಟ್ಟಣಕೆರೆ ಶೆಡ್ ನಲ್ಲಿ ನಟ ದರ್ಶನ್ 45 ನಿಮಿಷಗಳ ಕಾಲ ಇದ್ರಂತೆ. 110 ಕೆಜಿ ತೂಕವಿದ್ದ ದರ್ಶನ್ ರೇಣುಕಾಸ್ವಾಮಿಗೆ ಮೂರು ಏಟುಕೊಟ್ಟಿದ್ದಾರೆ ಅಂತ ಹೇಳಲಾಗಿದೆ.

ದರ್ಶನ್ ಏಟಿಗೆ ರೇಣುಕಾಸ್ವಾಮಿ ವಿಲವಿಲ ಒದ್ದಾಡಿದ್ದಾನೆ. ರೇಣುಕಾಸ್ವಾಮಿ ಎದೆಗೆ ದರ್ಶನ್ ಒದ್ದಿದ್ದಾರೆ ಎನ್ನಲಾಗಿದೆ. ಸಿನಿಮೀಯ ಶೈಲಿಯಲ್ಲಿ ಎತ್ತಿ ಲಾರಿಗೆ ಎಸೆದಿದ್ರಂತೆ, ಈ ರಭಸಕ್ಕೆ ರೇಣುಕಾಸ್ವಾಮಿಯ ತಲೆಗೆ ಗಂಭೀರವಾಗಿ ಏಟು ಬಿದ್ದಿತ್ತಂತೆ. ಮೂರನೇ ಏಟು ಅಂತಿಮ ಏಟಾಗಿತ್ತು. ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಫೋಟೋ ತೋರಿಸಿ ಮರ್ಮಾಂಗಕ್ಕೆ ಒದ್ದಿದ್ರಂತೆ ಅಂತ ವರದಿಗಳು ತಿಳಿಸಿವೆ.

ಪೊಲೀಸರ ಕಡೆಯಿಂದ ತನಿಖೆಯಾದ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇನ್ನು ಕೋರ್ಟ್ ನಲ್ಲಿ ವಾದ ವಿವಾದಗಳು ನಡೆಯಬೇಕಿದೆ, ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ಅಂತಿಮವಾಗಿ ಚಾರ್ಜ್ ಶೀಟ್ ನಲ್ಲಿರುವ ವಿಚಾರಗಳು ಹಾಗೂ ಆರೋಪಿಗಳ ಕಡೆಯಲ್ಲಿರುವ ಸಾಕ್ಷಿಗಳ ವಿಚಾರಣೆಯ ಬಳಿಕ ಅಂತಿಮವಾಗಿ ಕೋರ್ಟ್ ತೀರ್ಪು ನೀಡಲಿದೆ. ಚಾರ್ಜ್ ಶೀಟ್ ಸಲ್ಲಿಸಿದ ತಕ್ಷಣವೇ ಆರೋಪಿಗಳ ವಿರುದ್ಧ ಆರೋಪ ಸಾಬೀತಾಗುತ್ತದೆ ಎಂದಲ್ಲ. ಸಾಕ್ಷಿಗಳ ವಿಚಾರಣೆ ಬಹಳ ಮುಖ್ಯ ಅಂತ ಹೇಳಲಾಗಿದೆ.

ದರ್ಶನ್ ಹಾಗೂ ಗ್ಯಾಂಗ್ ಈ ಕೃತ್ಯ ನಡೆಸಿರುವುದು ಸಾಕ್ಷಿಗಳಿಂದ ಸಾಬೀತಾದರೆ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಾಕ್ಷಿಗಳು ಆರೋಪವನ್ನು ಸಾಬೀತು ಪಡಿಸಲು ವಿಫಲವಾದ್ರೆ ನಿರಪರಾಧ ಸಾಬೀತಾಗಬಹುದು. ಮುಂದೇನಾಗುತ್ತೋ ಕಾದು ನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version