ಇದು ಲವ್ ಮ್ಯಾಟ್ರು ಗುರು: ‘ತ್ರಿಕೋನ ಪ್ರೇಮ’ ಮತ್ತು 5 ಸ್ಟಾರ್ ಹೋಟೆಲ್ ನಲ್ಲಿ ಮರ್ಡರ್..!

ಗುವಾಹಟಿಯ ಪಂಚತಾರಾ ಹೋಟೆಲ್ ವೊಂದರಲ್ಲಿ ಪುಣೆಯ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಕೋಲ್ಕತ್ತಾದ ಪುರುಷ ಮತ್ತು ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಅಂಜಲಿ ಶಾ ಮತ್ತು ಆಕೆಯ ಪ್ರಿಯಕರ ಬಿಕಾಶ್ ಶಾ ದಂಪತಿ ಅಂಜಲಿಯ ಮಾಜಿ ಸಂಗಾತಿ ಸಂದೀಪ್ ಕಾಂಬ್ಳಿ (42) ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋಲ್ಕತ್ತಾಗೆ ಹಾರುವ ಕೆಲವೇ ಗಂಟೆಗಳ ಮೊದಲು ದಂಪತಿಯನ್ನು ಬಂಧಿಸಲಾಯಿತು.
ಪೊಲೀಸರ ಪ್ರಕಾರ, ಸಂದೀಪ್ ಕಾಂಬ್ಳಿ ಪುಣೆಯಲ್ಲಿ ಕಾರು ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಕೋಲ್ಕತಾ ವಿಮಾನ ನಿಲ್ದಾಣದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಶಾ ಜೊತೆಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದ.
ಆದರೆ, ಅಂಜಲಿ ಆಗಲೇ ಬಿಕಾಶ್ ಶಾ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧದಲ್ಲಿದ್ದರು. ಹೀಗಾಗಿ ಅಂಜಲಿ ಆತನೊಂದಿಗೆ ಸಲುಗೆಯಿಂದ ಇದ್ದು ಇಲ್ಲದ್ದಂತೆ ನಟಿಸಿದ್ದಳು. ಹೀಗಾಗಿ ಕಾಂಬ್ಳಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದ. ಹೀಗಾಗಿ ಈಕೆ ಅವನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದಳು. ಆದರೆ ಅವನು ಅವಳನ್ನು ಹಿಂಬಾಲಿಸುತ್ತಲೇ ಇದ್ದ.
ಅಂಜಲಿಯು ಬಿಕಾಶ್ ಗೆ ಈ ವಿಚಾರ ತಿಳಿಸಿದಳು. ಫೆಬ್ರವರಿ 4 ರಂದು ಗುವಾಹಟಿಯಲ್ಲಿ ಭೇಟಿಯಾಗಲು ಅಂಜಲಿ ಸಂದೀಪ್ ಅವರನ್ನು ಆಹ್ವಾನಿಸಿದಳು. ಅಲ್ಲಿ ಸಂದೀಪ್ ಈಕೆಗಾಗಿ ಹೋಟೆಲ್ ನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ. ಇತ್ತ ಬಿಕಾಶ್ ಅದೇ ಹೋಟೆಲ್ ನಲ್ಲಿ ಪ್ರತ್ಯೇಕ ಕೊಠಡಿಯನ್ನು ಸಹ ಕಾಯ್ದಿರಿಸಿದ್ದ. ಇದೇ ವೇಳೆ ಈ ಮೂವರ ಮಧ್ಯೆ ವಾಗ್ವಾದ ನಡೆದು ಜಗಳ ಆಗಿ ಚೂರಿಯಿಂದ ಇರಿದಾಗ ಸಂದೀಪ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಭಯಭೀತರಾದ ಬಿಕಾಶ್ ಮತ್ತು ಅಂಜಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕುರಿತು ಹೋಟೆಲ್ ಸಿಬ್ಬಂದಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು, ಅತಿಥಿ ಪಟ್ಟಿಗಳು ಮತ್ತು ವಿಮಾನ ನಿಲ್ದಾಣದ ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸಿ ಇಬ್ಬರನ್ನು ಪತ್ತೆಹಚ್ಚಿದರು. ರಾತ್ರಿ 9.15 ಕ್ಕೆ ಶಂಕಿತರು ಕೋಲ್ಕತ್ತಾಗೆ ತೆರಳುವ ಕೆಲವೇ ಗಂಟೆಗಳ ಮೊದಲು, ಸಂಜೆ 6.30 ರ ಸುಮಾರಿಗೆ ಅವರು ಬಿಕಾಶ್ ಮತ್ತು ಅಂಜಲಿಯನ್ನು ಅಜಾರಾ ಬಳಿ ಬಂಧಿಸಲಾಗಿದೆ.