7:16 AM Saturday 20 - December 2025

ಗುರುನಾನಕ್ ಜಯಂತಿ ಆಚರಣೆ ಹಿನ್ನೆಲೆ: ಪಾಕಿಸ್ತಾನಕ್ಕೆ ಆಗಮಿಸಿದ 3,000 ಭಾರತೀಯ ಸಿಖ್ಖರು

26/11/2023

ಸಿಖ್ ಧರ್ಮದ ಸಂಸ್ಥಾಪಕ ಬಾಬಾ ಗುರುನಾನಕ್ ದೇವ್ ಅವರ 554 ನೇ ಜನ್ಮ ದಿನಾಚರಣೆಗೆ ಸಂಬಂಧಿಸಿದ ಉತ್ಸವಗಳಲ್ಲಿ ಭಾಗವಹಿಸಲು ಸುಮಾರು 3,000 ಭಾರತೀಯ ಸಿಖ್ಖರು ಶನಿವಾರ ವಾಘಾ ಗಡಿ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಆಗಮಿಸಿದ್ದಾರೆ.

ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಹೆಚ್ಚುವರಿ ಕಾರ್ಯದರ್ಶಿ ರಾಣಾ ಶಾಹಿದ್ ಸಲೀಮ್, ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿ (ಪಿಎಸ್ಜಿಪಿಸಿ) ಪರ್ಧಾನ್ ಸರ್ದಾರ್ ಅಮೀರ್ ಸಿಂಗ್ ಮತ್ತು ಇತರ ಅಧಿಕಾರಿಗಳು ಲಾಹೋರ್ ಗಡಿಯಲ್ಲಿ ಭೇಟಿ ನೀಡಿದ ಯಾತ್ರಾರ್ಥಿಗಳನ್ನು ಸ್ವಾಗತಿಸಿದರು.

ಬಾಬಾ ಗುರುನಾನಕ್ ಅವರ ಜನ್ಮ ದಿನಾಚರಣೆಗೆ ಸಂಬಂಧಿಸಿದ ಉತ್ಸವಗಳಲ್ಲಿ ಭಾಗವಹಿಸಲು ಸುಮಾರು 3,000 ಭಾರತೀಯ ಸಿಖ್ ಯಾತ್ರಿಗಳು ಇಲ್ಲಿಗೆ ಆಗಮಿಸಿದರು. ನಾವು ಸಿಖ್ ಯಾತ್ರಾರ್ಥಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆಗಳು, ವಸತಿ ಮತ್ತು ಪ್ರಯಾಣ ಸೌಲಭ್ಯಗಳನ್ನು ಮಾಡಿದ್ದೇವೆ” ಎಂದು ಸಲೀಮ್ ಸುದ್ದಿಗಾರರಿಗೆ ತಿಳಿಸಿದರು.

ಬಾಬಾ ಗುರುನಾನಕ್ ಅವರ ಜನ್ಮ ದಿನಾಚರಣೆಗೆ ಸುಮಾರು 3,000 ಭಾರತೀಯ ಸಿಖ್ಖರಿಗೆ ಅವಕಾಶ ನೀಡಲಾಗುವುದು ಎಂದು ಒಪ್ಪಂದವಾಗಿದ್ದರೂ, ಹೆಚ್ಚಿನ ಸಿಖ್ಖರಿಗೆ ಅವಕಾಶ ನೀಡಲು ಇಟಿಪಿಬಿ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version