ಸೌದಿ ಜೈಲಲ್ಲಿ ಭಾರತೀಯ ವ್ಯಕ್ತಿ ಅತಂತ್ರ: ಬಿಡಿಸಿಕೊಳ್ಳಲು ಒಟ್ಟು 30 ಕೋಟಿ ರೂಪಾಯಿ ಸಂಗ್ರಹ

ಸೌದಿ ಜೈಲಲ್ಲಿರುವ ಕೇರಳದ ಅಬ್ದುಲ್ ರಹೀಮ್ ಎಂಬವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಅವರನ್ನು ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯವಾಗಿ ಸಂತ್ರಸ್ತ ಕುಟುಂಬಕ್ಕೆ ಹಣವನ್ನು ಪರಿಹಾರವಾಗಿ ನೀಡಿ ರಹೀಮ್ ಅವರನ್ನು ಬಿಡಿಸಿಕೊಳ್ಳುವ ಪ್ರಯತ್ನಗಳು ನಡೆದಿದ್ದು ಇದುವರೆಗೆ 30 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಅವರ ಬಿಡುಗಡೆಗೆ 34 ಕೋಟಿ ರೂಪಾಯಿ ಬೇಕಾಗಿದೆ. ಹಾಗೆಯೇ ಭಾರತದಲ್ಲಿ ಸಂಗ್ರಹಿಸಿದ ಈ ಮೊತ್ತವನ್ನು ಸೌದಿ ಅರೇಬಿಯಾ ಕ್ಕೆ ಕಳುಹಿಸಬೇಕಾಗಿದೆ ಮತ್ತು ಅದಕ್ಕಿರುವ ಪ್ರಕ್ರಿಯೆಗಳನ್ನು ಮುಗಿಸಬೇಕಾಗಿದೆ.
ಇದೇ ವೇಳೆ ಗಲ್ಲು ಶಿಕ್ಷೆಗೂ ಹಣ ಪಾವತಿಸಿ ಬಿಡುಗಡೆಗೊಳಿಸುವುದಕ್ಕೂ ಅಧಿಕೃತವಾಗಿ ಸೌದಿ ಅರೇಬಿಯಾ ಸರಕಾರಕ್ಕೆ ಸಂಬಂಧ ಇಲ್ಲದೆ ಇರುವುದರಿಂದ ಅಧಿಕಾರಿಗಳು ನೇರವಾಗಿ ಇದರಲ್ಲಿ ಭಾಗಿಯಾಗುತ್ತಿಲ್ಲ. ತಮಗೆ ಹಣ ಪಾವತಿಸಿದರೆ ಅಬ್ದುಲ್ ರಹೀಮ್ ರನ್ನು ಕ್ಷಮಿಸುವುದಾಗಿ ಕುಟುಂಬ ಹೇಳಿದೆ. ಆದ್ದರಿಂದ ಆ ಕುಟುಂಬದ ಜೊತೆಗೆ ವ್ಯವಹಾರ ನಡೆಸಲಾಗುತ್ತಿದೆ. ಹಾಗೆಯೇ ಬಿಡುಗಡೆಗೆ ಸಂಬಂಧಿಸಿ ನೆರವಾಗುವುದಾಗಿ ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಬಾಲಕನನ್ನು ಹತ್ಯೆ ಮಾಡಿದ ಆರೋಪ ರಹೀಮ್ ಅವರ ಮೇಲಿದೆ. ಕಳೆದ 18 ವರ್ಷದಿಂದ ಅವರು ಜೈಲಲ್ಲಿದ್ದಾರೆ. ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ತನ್ನ ಮಗನನ್ನು ಬಿಡುಗಡೆಗೊಳಿಸಿ ಕರೆತರಬೇಕು ಎಂದು ರಹೀಮ್ ಅವರ ತಾಯಿ ಪಾತಮ್ಮ ಅವರು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿನಂತಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth